ಕರ್ನಾಟಕ

karnataka

ETV Bharat / state

ಹುತಾತ್ಮ ವೀರ ಸೇನಾನಿಗಳು, ಪೊಲೀಸರಿಗೆ ನಮನ ಸಮಾರಂಭ - Bhagat Kranthi sene Tumkur

ತುಮಕೂರು ವಿಶ್ವವಿದ್ಯಾನಿಲಯದ ಮುಂಭಾಗ ಭಗತ್ ಕ್ರಾಂತಿ ಸೇನೆಯಿಂದ ಯುದ್ಧದಲ್ಲಿ ವೀರಮರಣ ಹೊಂದಿದ ಸೇನಾನಿಗಳಿಗೆ ಹಾಗೂ ದೇಶದಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ಪೊಲೀಸರಿಗೆ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.

Commemoration ceremony for war heroes and martyrs
ವೀರಮರಣ ಹೊಂದಿದ ಸೇನಾನಿಗಳಿಗೆ, ಹುತಾತ್ಮರಾದ ಪೊಲೀಸರಿಗೆ ನಮನ ಸಮಾರಂಭ

By

Published : Jul 25, 2020, 1:53 PM IST

Updated : Jul 25, 2020, 3:13 PM IST

ತುಮಕೂರು:ತುಮಕೂರು ವಿವಿಯ ಮುಂಭಾಗ ಭಗತ್ ಕ್ರಾಂತಿ ಸೇನೆ ವತಿಯಿಂದ ಯುದ್ಧದಲ್ಲಿ ವೀರಮರಣ ಹೊಂದಿದ ಸೇನಾನಿಗಳಿಗೆ ಹಾಗೂ ದೇಶದಲ್ಲಿ ಕಾರ್ಯನಿರ್ವಹಿಸುವ ವೇಳೆ ಹುತಾತ್ಮರಾದ ಪೊಲೀಸರಿಗೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸಲಾಯಿತು.

ವೀರಮರಣ ಹೊಂದಿದ ಸೇನಾನಿಗಳಿಗೆ, ಹುತಾತ್ಮರಾದ ಪೊಲೀಸರಿಗೆ ನಮನ ಸಮಾರಂಭ

ಶಾಸಕ ಜ್ಯೋತಿ ಗಣೇಶ್ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಭಗತ್ ಕ್ರಾಂತಿ ಸೇನೆ ಸದಸ್ಯ ರಾಧಾಕೃಷ್ಣ, ಕಳೆದ 16 ವರ್ಷಗಳಿಂದ ವಿಜಯ್ ದಿವಸ್ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಮುಂದುವರಿದು ಮಾತನಾಡಿದ ಅವರು, ಭಾರತ ದೇಶ ಸ್ವಾತಂತ್ರ್ಯಗೊಂಡ ನಂತರ ದೇಶದ ರಕ್ಷಣೆಗಾಗಿ ಅನೇಕ ಯುದ್ಧಗಳು ನಡೆದಿವೆ. ಯುದ್ಧದಲ್ಲಿ ಮಡಿದಂತಹ ವೀರಯೋಧರಿಗೆ ನಮನ ಸಲ್ಲಿಸುವ ಜೊತೆಗೆ ದೇಶದಲ್ಲಿ ಆಂತರಿಕ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವಪೂರ್ವಕ ನಮನ ಸಲ್ಲಿಸುವ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಸೈನಿಕರನ್ನು ಹಾಗೂ ಪೊಲೀಸರನ್ನು ಸ್ಫೂರ್ತಿದಾಯಕವಾಗಿ ತೆಗೆದುಕೊಂಡು ನಾವು ಸಹ ದೇಶದ ಸೇವೆಗೆ ಮುಂದಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಈ ವೇಳೆ ತಿಳಿಸಿದರು.

ಇದೇ ವೇಳೆ, ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದಂತಹ ಮಾಜಿ ಯೋಧರಾದ ವೆಂಕಟರಮಣ ಸ್ವಾಮಿ ಅವರನ್ನು ಶಾಸಕ ಜ್ಯೋತಿ ಗಣೇಶ್ ಸನ್ಮಾನಿಸಿದರು.

Last Updated : Jul 25, 2020, 3:13 PM IST

ABOUT THE AUTHOR

...view details