ಕರ್ನಾಟಕ

karnataka

ETV Bharat / state

ಶಿಕಾರಿಪುರದಂತೆ ಶಿರಾ ಕೂಡಾ  ಮಾದರಿ ತಾಲೂಕನ್ನಾಗಿ ಮಾಡುವೆ:ಬಿಎಸ್​​​ವೈ ಭರವಸೆ - BJP candidate Dr Rajesh Gowda

ಶಿರಾದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಭಾಗವಹಿಸಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಮತ ಯಾಚಿಸಿದರು.

Shira by election
ವಿಜಯ ಸಂಕಲ್ಪ ಯಾತ್ರೆ

By

Published : Oct 30, 2020, 5:46 PM IST

Updated : Oct 30, 2020, 6:54 PM IST

ತುಮಕೂರು: ಶಿರಾ ತಾಲೂಕನ್ನು ಶಿಕಾರಿಪುರ ತಾಲೂಕಿನಂತೆ ಮಾದರಿ ತಾಲೂಕನ್ನಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಯ ನೀಡಿದ್ದಾರೆ.

ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ

ಶಿರಾ ಹೊರವಲಯದಲ್ಲಿರುವ ಮೊದಲೂರು ಕೆರೆಯ ಸಮೀಪ ನಡೆದ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರ ಮತಯಾಚಿಸಿ ಮಾತನಾಡಿದ ಅವರು, ಇನ್ನು ಆರು ತಿಂಗಳೊಳಗಾಗಿ ಮೊದಲೂರು ಕೆರೆ ತುಂಬಿಸಿ ನಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂಬ ಭರವಸೆ ನೀಡಿದರು.

ನಾನು ಒಮ್ಮೆ ಭರವಸೆ ಕೊಟ್ಟರೆ ಅದು ಸುಳ್ಳಾಗಿಲ್ಲ. ಕೆಆರ್ ಪೇಟೆಯಲ್ಲಿ ವಿಜಯೇಂದ್ರ ಅವರು ಯಾವ ರೀತಿಯ ಭರವಸೆಗಳನ್ನು ನೀಡಿದ್ದರು. ಅದೆಲ್ಲವನ್ನು ಈಗ ಈಡೇರಿಸಿದ್ದೇವೆ. ಅದೇ ರೀತಿ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.

Last Updated : Oct 30, 2020, 6:54 PM IST

ABOUT THE AUTHOR

...view details