ತುಮಕೂರು: ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಬಾರ್ಗಳ ಮೇಲೆ ಮಹಾನಗರ ಪಾಲಿಕೆ ಕಮೀಷನರ್ ಭೂ ಬಾಲನ್.ಟಿರವರು ದಾಳಿ ನಡೆಸಿದ್ದು, ಈ ವೇಳೆ ಬಾರ್ ಮಾಲೀಕರು ಮತ್ತು ಪಾಲಿಕೆ ಕಮಿಷನರ್ ನಡುವೆ ಮಾತಿನ ಚಕಮಕಿ ನಡೆದಿದೆ.
ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಬಾರ್ಗಳ ಮೇಲೆ ದಾಳಿ: ದಂಡ ವಸೂಲಿ
ತುಮಕೂರಿನಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆಂಬುದರ ಕುರಿತು ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದಿದ್ದು, ಕಮೀಷನರ್ ನೇತೃತ್ವದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಸಿಬ್ಬಂದಿ ದಾಳಿ ನಡೆಸಿದ್ದರು.
ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆಂಬುದರ ಕುರಿತು ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ರಾತ್ರೋ ರಾತ್ರಿ ಕಾರ್ಯಾಚರಣೆಗಿಳಿದಿದ್ದು, ಕಮೀಷನರ್ ನೇತೃತ್ವದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಸಿಬ್ಬಂದಿ ದಾಳಿ ನಡೆಸಿದ್ದರು. ದಾಳಿ ವೇಳೆ ಎಸ್.ಆರ್ ಬಾರ್ ಮಾಲೀಕ ಹಾಗೂ ಕಮೀಷನರ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಾರ್ ಬಾಗಿಲು ಹಾಕುವಂತೆ ಕಮೀಷನರ್ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.
ಈ ವೇಳೆ ಬಾರ್ ಮಾಲೀಕನಿಂದ 10 ಸಾವಿರ ದಂಡ ವಸೂಲಿ ಮಾಡಲಾಯಿತು. ನಗರದ ಇತರೆ ಬಾರ್ಗಳಿಂದ 30 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ. ದಾಳಿ ವೇಳೆ ಆರೋಗ್ಯಾಧಿಕಾರಿ ನಾಗೇಶ್ ಕುಮಾರ್, ಪರಿಸರ ಅಭಿಯಂತರ ಮೃತ್ಯಂಜಯ, ಮೋಹನ್ ಹಾಜರಿದ್ದರು.