ತುಮಕೂರು: ಕೇಂದ್ರ ಸರ್ಕಾರ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸಿಐಟಿಯು ಸಂಘಟನೆಯ ವತಿಯಿಂದ ನಗರದ ಬಿಎಸ್ಎನ್ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಸಿಐಟಿಯು ಪ್ರತಿಭಟನೆ
ಈರುಳ್ಳಿ ಕೆಜಿ ಗೆ 200 ರೂ. ಏರಿಕೆಯಾಗಿದೆ. ಈರುಳ್ಳಿ ಬೆಳೆದ ರೈತರಿಗೆ ಇದರ ಲಾಭ ಸಿಗದೇ, ಮಧ್ಯವರ್ತಿಗಳು ಮಾತ್ರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ವೇಳೆ ಮಾತನಾಡಿದ ಸಿಐಟಿಯುನ ಮುಖಂಡ ಸೈಯದ್ ಮುಜೀಬ್, ದೇಶದ ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿ ಗೆ 200 ರೂ. ಏರಿಕೆಯಾಗಿದೆ. ಈರುಳ್ಳಿ ಬೆಳೆದ ರೈತರಿಗೆ ಇದರ ಲಾಭ ಸಿಗದೇ, ಮಧ್ಯವರ್ತಿಗಳು ಮಾತ್ರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕೇಂದ್ರದ ಬೇಜವಾಬ್ದಾರಿ ಮಂತ್ರಿಯೊಬ್ಬರು ಹೇಳುತ್ತಾರೆ, ನಾವು ಈರುಳ್ಳಿ ಸೇವಿಸುವುದಿಲ್ಲ ಹಾಗಾಗಿ ನಮ್ಮ ಮನೆಯಲ್ಲಿ ಈರುಳ್ಳಿ ಸಮಸ್ಯೆ ಇಲ್ಲ ಎಂದು. ಇದು ಅವರ ಬೇಜವಾಬ್ದಾರಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕಾಳಸಂತೆಕೋರರನ್ನು ಮಟ್ಟ ಹಾಕಬೇಕು. ಈರುಳ್ಳಿ ಬೆಲೆಯನ್ನು ನಿಯಂತ್ರಣ ಮಾಡುವುದರ ಜೊತೆಗೆ ಪಡಿತರ ಅಂಗಡಿಗಳಲ್ಲಿ 1ಕೆಜಿ ಈರುಳ್ಳಿಗೆ 25 ರೂ ಬೆಲೆ ನಿಗದಿ ಮಾಡುವ ಮೂಲಕ ಬಡವರಿಗೂ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.