ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಡಿ.12ರಂದು ಕಾರ್ಮಿಕ ವಲಯದಿಂದ ಪ್ರತಿಭಟನೆ - ಡಿ.12 ರಂದು ಕಾರ್ಮಿಕ ವಲಯದಿಂದ ಪ್ರತಿಭಟನೆ

ಅಸಂಘಟಿತ ಕಾರ್ಮಿಕ ವಲಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 12ರಂದು ವಿಧಾನಸೌಧ ಚಲೋ ಬೃಹತ್​ ಜಾಥಾ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.

kn_tmk_01_citu_pressmeet_script_KA10010
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಡಿ.12 ರಂದು ಕಾರ್ಮಿಕ ವಲಯದಿಂದ ಪ್ರತಿಭಟನೆ

By

Published : Nov 28, 2019, 10:59 PM IST

ತುಮಕೂರು: ಅಸಂಘಟಿತ ಕಾರ್ಮಿಕ ವಲಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 12ರಂದು ವಿಧಾನಸೌಧ ಚಲೋ ಬೃಹತ್​ ಜಾಥಾ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಡಿ.12ರಂದು ಕಾರ್ಮಿಕ ವಲಯದಿಂದ ಪ್ರತಿಭಟನೆ

ಅಸಂಘಟಿತ ವಲಯದಿಂದ ಕೇಂದ್ರ ಹಾಗೂ ರಾಜ್ಯದ ಬೊಕ್ಕಸಕ್ಕೆ ಶೇ. 60ರಷ್ಟು ಆದಾಯವಾಗುತ್ತದೆ. ಸರ್ಕಾರವೇ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ಸುಮಾರು 43 ವಿಭಾಗದ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಹಮಾಲಿ, ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ಖಾಸಗಿ ವಾಹನ ಚಾಲಕರು, ನಿರ್ವಾಹಕರಿಗೆ ಕಾರ್ಮಿಕ ಇಲಾಖೆ ರೂಪಿಸಿರುವ ಭವಿಷ್ಯ ನಿಧಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. 2020ರ ಬಜೆಟ್​​ನಲ್ಲಿ ಕನಿಷ್ಠ 500 ಕೋಟಿ ಅನುದಾನ ನೀಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗುವುದು ಎಂದರು.

ABOUT THE AUTHOR

...view details