ತುಮಕೂರು/ಶಿವಮೊಗ್ಗ:ಯಾವುದೇ ಒಂದು ಪ್ರದೇಶದ ರಸ್ತೆಯ ಸ್ಥಿತಿಗತಿಗಳ ಮೇಲೆಯೇ ಅಲ್ಲಿನ ಅಭಿವೃದ್ಧಿಯನ್ನ ಅಳೆಯೋದುಂಟು. ಆದ್ರೆ ಅದೆಷ್ಟೋ ಕಡೆಗಳಲ್ಲಿ ಕೆಲ ಮುಖ್ಯ ರಸ್ತೆಗಳನ್ನ ಮಾತ್ರ ಅಭಿವೃದ್ಧಿಪಡಿಸಲಾಗುತ್ತದೆಯೇ ಹೊರತು ಗುಂಡಿ ಬಿದ್ದ ರಸ್ತೆಗಳತ್ತ ಅಧಿಕಾರಿಗಳು ಕಣ್ಣೆತ್ತಿಯೂ ನೋಡಲ್ಲ. ದುರಸ್ತಿ ಕಾಮಗಾರಿಗಳು ಹೆಸರಿಗೆ ಮಾತ್ರ. ನೀರಿಗೆ ಹೋಮ ಮಾಡಿದ ಪರಿಸ್ಥಿತಿ.
ತುಮಕೂರಿನ ಪರಿಸ್ಥಿತಿ ನೋಡೋದಾದ್ರೆ, ಬರೋಬ್ಬರಿ ಸಾವಿರ ಕಿಲೋ ಮೀಟರ್ಗೂ ಮೀರಿದ ರಸ್ತೆ ವ್ಯಾಪ್ತಿಯಿದೆ. ಆದ್ರೆ ಶೇ.60ರಷ್ಟು ರಸ್ತೆಗಳು ಇನ್ನೂ ಕೂಡ ಮಣ್ಣಿನಿಂದ ಕೂಡಿರೋದು ಮಾತ್ರ ವಿಪರ್ಯಾಸ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೇವಲ ಆರು ವಾರ್ಡ್ಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ರೆ, ಉಳಿದವನ್ನ ಶಾಸಕರ ಅನುದಾನ, ಪಾಲಿಕೆ ವ್ಯಾಪ್ತಿಯ ಅನುದಾನದಲ್ಲೇ ಅಭಿವೃದ್ಧಿಪಡಿಸಬೇಕಿದೆ. ಹಾಗಾಗಿ ಅದೆಷ್ಟೋ ಕಡೆಗಳಲ್ಲಿ ಗುಂಡಿ ಮುಚ್ಚೋ ಕಾರ್ಯಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.