ಕರ್ನಾಟಕ

karnataka

ETV Bharat / state

ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಲಾಗುವುದು: ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ - ಚಿತ್ರದುರ್ಗ ಲೋಕಸಭೆ ಸದಸ್ಯರು

ತುಮಕೂರು ಜಿಲ್ಲೆಯ ಗ್ರಾಮಸ್ಥರು, ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪಾವಗಡ ತಾಲ್ಲೂಕು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ

By

Published : Sep 18, 2019, 9:05 PM IST

ತುಮಕೂರು : ಜಿಲ್ಲೆಯ ಗ್ರಾಮಸ್ಥರು, ಸಮುದಾಯದ ಮುಖಂಡರು ಈ ವಾರದಲ್ಲಿ ಚಿತ್ರದುರ್ಗ ಸಂಸದರನ್ನು ಪೆಮ್ಮನಹಳ್ಳಿ ಗೊಲ್ಲರ ಹಟ್ಟಿಗೆ ಕರೆಸಿ ಅಭಿವೃದ್ದಿಗೆ ನಾಂದಿ ಹಾಡುವ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ ತಿಳಿಸಿದ್ದಾರೆ.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಮಾ
ಚಿತ್ರದುರ್ಗ ಲೋಕಸಭೆ ಸದಸ್ಯರಿಗೆ ಪೆಮ್ಮನಹಳ್ಳಿಯ ಗೊಲ್ಲರ ಹಟ್ಟಿಗೆ ಪ್ರವೇಶ ನಿರಾಕರಿಸಿದ ಘಟನೆ ಸೋಮವಾರ ನಡೆದ ಹಿನ್ನೆಲೆಯಲ್ಲಿ ಮಂಗಳವಾರ ಹಟ್ಟಿಗೆ ಭೇಟಿ ನೀಡಿ ಸಮುದಾಯದ ಮುಖಂಡರ ಸಭೆ ನಡೆಸಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾತನಾಡಿದ್ರು.
ಸಂಸದರಿಗೆ ಹಟ್ಟಿಯ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ. ಸಂಪ್ರದಾಯಕ್ಕೆ ಸಂಬಂಧಪಟ್ಟ ವಿಷಯದ ಪ್ರಸ್ತಾಪ ಮಾತ್ರ ನಡೆದಿದ್ದು, ಹಟ್ಟಿ ಪ್ರವೇಶಕ್ಕೆ ನಿಷೇಧವಿಲ್ಲ ಎಂದು ಯಾದವ ಸಮುದಾಯದ ಜನತೆ ತಿಳಿಸಿದ್ದಾರೆ. ಆ ರೀತಿ ನಡೆದಿದ್ದರೆ ಕ್ಷಮೆ ಕೋರುತ್ತೆವೆಂದು ತಿಳಿಸಿದ್ದಾರೆ ಎಂದರು.
ಯಾದವ ಸಮುದಾಯದ ಸಭೆಯಲ್ಲಿ ತಹಶೀಲ್ದಾರ್ ವರದರಾಜು ಮಾತನಾಡಿ, ನಾವು 21ನೇ ಶತಮಾನದಲ್ಲಿದ್ದು ಹಟ್ಟಿಗೆ ಎಲ್ಲಾ ಸಮುದಾಯದವರಿಗೂ ಪ್ರವೇಶವಿದೆ. ಪ್ರವೇಶ ನಿರ್ಬಂಧಿಸುವ ಕೆಲಸ ಕಾನೂನು ಬಾಹಿರವಾಗುತ್ತದೆ. ಇಂಥ ಘಟನೆಗಳು ಮರುಕಳಿಸಿದ್ರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

ನಿಮ್ಮ ಸಂಸದರನ್ನು ಇದೇ ಗ್ರಾಮಕ್ಕೆ ಕರೆಸಿಕೊಂಡು ವಸತಿ, ಚರಂಡಿ, ಶಾಲೆಗಳು, ದೇವಾಲಯ ಸೇರಿದಂತೆ ಇತರ ಸೌಲಭ್ಯಗಳ ಚರ್ಚಿಸಿ ಸೌಲಭ್ಯ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದ್ರು.

ಹಟ್ಟಿಯ ಸಂಪ್ಪದಾಯದ ನೆಪ ಹೇಳಿ ಸಂಸದ ಎ ನಾರಾಯಣ ಸ್ವಾಮಿ ಅವರಿಗೆ ಇಲ್ಲಿನ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗ್ರಾಮಸ್ಥರು ನಿರ್ಬಂಧ ಹೇರಿದ್ದರು.

ABOUT THE AUTHOR

...view details