ಕರ್ನಾಟಕ

karnataka

ETV Bharat / state

ಬೇಡದ ಬಾಲ್ಯ ವಿವಾಹ.. ಪ್ರಾಣ ಕಳೆದುಕೊಂಡ ಅಪ್ರಾಪ್ತೆ!!

ಮಧು ಎಂಬಾತನ ತಂದೆ ವರದರಾಜು, ತಾಯಿ ವನಜಾಕ್ಷಿ ಮತ್ತು ಬಾಲಕಿಯ ತಂದೆ ಹೊನ್ನೇಶ್, ತಾಯಿ ಪುಷ್ಪ ವಿರುದ್ಧ ದೂರು ನೀಡಿದ್ದಾರೆ. ಶಿರಾ ಪೊಲೀಸರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಆ್ಯಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

dsdd
ಬೇಡವೆಂದರು ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ ದುರುಳರು

By

Published : Apr 29, 2020, 12:16 PM IST

ತುಮಕೂರು :ಬಾಲ್ಯ ವಿವಾಹ ಮಾಡಿದರೆಂದು ಮನನೊಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.

ಬೇಡವೆಂದರೂ ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ ದುರುಳರು..

16ರ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಏಪ್ರಿಲ್ 26ರಂದು ರಂಗನಾಥಪುರ ಗ್ರಾಮದ ಮಧು ಎಂಬಾತನೊಂದಿಗೆ ಬಲವಂತವಾಗಿ ಮದುವೆ ಮಾಡಿದ್ದರಂತೆ. ಇದರಿಂದ ಮನನೊಂದ ಬಾಲಕಿ ಏಪ್ರಿಲ್ 28ರಂದು ಬೆಳಗ್ಗೆ 9.30ಕ್ಕೆ ರಂಗನಾಥಪುರದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಶಿರಾ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಹಿರಿಯ ಮಹಿಳಾ ಮೇಲ್ವಿಚಾರಕಿ ಸುರೇಖ ಠಾಕೆ ಎಂಬುವರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಧು ಎಂಬಾತನ ತಂದೆ ವರದರಾಜು, ತಾಯಿ ವನಜಾಕ್ಷಿ ಮತ್ತು ಬಾಲಕಿಯ ತಂದೆ ಹೊನ್ನೇಶ್, ತಾಯಿ ಪುಷ್ಪ ವಿರುದ್ಧ ದೂರು ನೀಡಿದ್ದಾರೆ. ಶಿರಾ ಪೊಲೀಸರು ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಆ್ಯಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ABOUT THE AUTHOR

...view details