ತುಮಕೂರು: ಈಗಾಗಲೇ ಜಿಲ್ಲೆಯ ಸಿರಾ ಪಟ್ಟಣದ ವ್ಯಕ್ತಿಯೊಬ್ಬರು ಕೊರೊನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದು, ಸೋಂಕು ನಿವಾರಣೆಗೆ ಸಿರಾ ಪಟ್ಟಣದೆಲ್ಲೆಡೆ 'ಸೋಡಿಯಂ ಹೈಪೋಕ್ಲೋರೈಡ್' ಸಿಂಪಡಣೆ ಮಾಡಲಾಗುತ್ತಿದೆ.
ಮೃತ ವ್ಯಕ್ತಿಯಿದ್ದ ಬಡಾವಣೆಯಲ್ಲಿ 'ಸೋಡಿಯಂ ಹೈಪೋಕ್ಲೋರೈಡ್' ಸಿಂಪಡಣೆ - ಸಿರಾ ಪಟ್ಟಣದಲ್ಲಿ ಸೋಡಿಯಂ ಹೈಪೋಕ್ಲೋರೈಡ್' ಸಿಂಪಡಣೆ
ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳಿಗೆ 'ಸೋಡಿಯಂ ಹೈಪೋಕ್ಲೋರೈಡ್' ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ನೀರಿಗೆ ಬೆರೆಸಿಕೊಂಡು ಸಿರಾ ಪಟ್ಟಣದಾದ್ಯಂತ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ.
ಅದ್ರಲ್ಲೂ ಮುಖ್ಯವಾಗಿ ಕೋವಿಡ್ 19 ಗೆ ತುತ್ತಾಗಿ ಮೃತಪಟ್ಟಿರುವ ವ್ಯಕ್ತಿ ವಾಸ ಮಾಡುತ್ತಿದ್ದ ಬಡಾವಣೆ ಸುತ್ತಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಬಡಾವಣೆಯ ಪ್ರತಿ ಮನೆ ಸುತ್ತಲೂ ದಿನಕ್ಕೆ ಎರಡು ಬಾರಿ ಸೋಡಿಯಂ ಹೈಪೋಕ್ಲೋರೈಡ್ ಸಿಂಪಡಿಸಲಾಗುತ್ತಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ವಾಹನಗಳಿಗೆ 'ಸೋಡಿಯಂ ಹೈಪೋಕ್ಲೋರೈಡ್' ಅನ್ನು ನಿರ್ದಿಷ್ಟ ಪ್ರಮಾಣದಲ್ಲಿ ನೀರಿಗೆ ಬೆರೆಸಿಕೊಂಡು ಸಿರಾ ಪಟ್ಟಣದಾದ್ಯಂತ ಸಿಂಪಡಣೆ ಮಾಡುವಲ್ಲಿ ನಿರತರಾಗಿದ್ದಾರೆ.
ಇದಲ್ಲದೆ ಕೋವಿಡ್ 19 ನಿಂದ ಮೃತ ವ್ಯಕ್ತಿಯು ಓಡಾಡಿದ್ದ ತಿಪಟೂರಿನಲ್ಲಿಯೂ ಸೋಡಿಯಂ ಹೈಪೋಕ್ಲೋರೈಡ್' ಸಿಂಪಡಣೆ ಮಾಡಲಾಗುತ್ತಿದೆ. ಅದೇ ರೀತಿ
ತುಮಕೂರು ನಗರದ ವಿವಿಧ ಬಡಾವಣೆಯಲ್ಲಿ ಸಿಂಪಡಿಸಲಾಗುತ್ತಿದೆ.