ತುಮಕೂರು: ಬೋನಿಗೆ ಬಿದ್ದಿದ್ದ ಚಿರತೆಯನ್ನು ಕೆಣಕಲು ಹೋಗಿದ್ದ ವ್ಯಕ್ತಿಯೊಬ್ಬರನ್ನ ಪರಚಿರುವ ಘಟನೆ ಜಿಲ್ಲೆಯ ಮಂಜುನಾಥಪುರ ಗ್ರಾಮದಲ್ಲಿ ನಡೆದಿದೆ.
ಸುಮ್ಮಲಿರಲಾರದೆ ಕೆಣಕಲು ಹೋದ.. ಪರಚಿ ಗಾಯಗೊಳಿಸಿತು ಬೋನಿಗೆ ಬಿದ್ದ ಚಿರತೆ! - ತುಮಕೂರು ಸುದ್ದಿ
ಬೋನಿಗೆ ಬಿದ್ದಿದ್ದ ಚಿರತೆಯನ್ನು ಕೆಣಕಲು ಹೋಗಿದ್ದ ವ್ಯಕ್ತಿಯೊಬ್ಬರನ್ನ ಪರಚಿರುವ ಘಟನೆ ತುಮಕೂರು ಜಿಲ್ಲೆ ಮಂಜುನಾಥಪುರ ಗ್ರಾಮದಲ್ಲಿ ನಡೆದಿದೆ.
ಕೆಣಕಲು ಹೋದವನಿಗೆ ಪರಚಿ ಗಾಯಗೊಳಿಸಿತು ಬೋನಿಗೆ ಬಿದ್ದ ಚಿರತೆ!
ಬೋನಿನಲ್ಲಿ ಸೆರೆಯಾಗಿದ್ದ ಚಿರತೆಯನ್ನ ಮರದ ಕೊಂಬೆಯಿಂದ ತಿಪಟೂರು ತಾಲೂಕು ದಾಸನಕಟ್ಟೆಯ ರಮೇಶ್ ಎಂಬಾತ ಕೆಣಕುತ್ತಿದ್ದನು. ಮರದ ಕೊಂಬೆಯನ್ನು ಬಾಯಿಂದ ಕಚ್ಚಿ ಹಿಡಿದು ಸಮೀಪಕ್ಕೆ ಚಿರತೆ ಎಳೆಯುತ್ತಿದ್ದಂತೆ,ರಮೇಶ್ ಕೂಡ ಬೋನಿನ ಬಳಿ ಹೋಗಿದ್ದಾನೆ. ತಕ್ಷಣ ಸಿಟ್ಟಿಗೆದ್ದ ಚಿರತೆ ಆತನ ಬಲಗೈಯನ್ನು ಪರಿಚಿ ಗಾಯಗೊಳಿಸಿದೆ.
ರಮೇಶ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.