ಕರ್ನಾಟಕ

karnataka

ETV Bharat / state

ಮೂರು ಮೇಕೆಗಳನ್ನು ಕೊಂದ ಚಿರತೆ - TUMKUR

ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆ ಮೂರು ಮೇಕೆಗಳನ್ನು ತಿಂದು ಹಾಕಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ.

ಮೂರು ಮೇಕೆಗಳನ್ನು ಕೊಂದುಹಾಕಿದ ಚಿರತೆ

By

Published : Jun 11, 2019, 5:35 PM IST

ತುಮಕೂರ: ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಚಿರತೆ ಮೂರು ಮೇಕೆಗಳನ್ನು ತಿಂದು ಹಾಕಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ.

ಮೂರು ಮೇಕೆಗಳನ್ನು ಕೊಂದ ಚಿರತೆ
ಮುಂಜಾನೆ ಸುಮಾರು 4:30ರ ಸಂದರ್ಭದಲ್ಲಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಮೇಕೆಗಳನ್ನು ಎಳೆದುಕೊಂಡು ಹೋಗಿದೆ. ಕೊಟ್ಟಿಗೆ ಬಳಿ ಮಲಗಿದ್ದ ಮಾಲೀಕ ಚಿಕ್ಕಣ್ಣ ಕೂಡ ಚಿರತೆಯನ್ನು ಕಂಡು ಭಯಭೀತರಾಗಿದ್ದಾರೆ. ತಕ್ಷಣ ಸಮೀಪದ ಮನೆಯೊಂದರ ಬಳಿ ಹೋಗಿ ಅಡಗಿ ಕುಳಿತಿದ್ದು, ಚಿರತೆ ಹೋದ ಬಳಿಕ ಹೊರಗೆ ಬಂದು ನೋಡಿದಾಗ ಮೂರು ಮೇಕೆಗಳು ಸತ್ತು ಬಿದ್ದಿದ್ದವು. ಪದೇ ಪದೇ ಚಿರತೆ ದಾಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ABOUT THE AUTHOR

...view details