ಕರ್ನಾಟಕ

karnataka

ETV Bharat / state

ಕೋವಿಡ್ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ : ಸೋಂಕಿತರ ಆಕ್ರೋಶ - corona

ಸ್ಯಾನಿಟೈಸ್ ಮಾಡದೆ ಇರುವುದರಿಂದ ಹೊಸದಾಗಿ ರೋಗಿಗಳನ್ನು ತಂದು ಇಲ್ಲಿ ಬಿಡುತ್ತಿದ್ದಾರೆ. ಗುಣಮುಖರಾದವರು ಕೂಡ ಪುನಃ ಸೋಂಕಿಗೆ ಒಳಗಾಗುವಂತಹ ಸ್ಥಿತಿ ಇದೆ..

chaos at covid care center
ಕೋವಿಡ್ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ

By

Published : May 30, 2021, 10:50 PM IST

ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಕುರುಬರಹಳ್ಳಿಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಮೂಲಸೌಲಭ್ಯವಿಲ್ಲದೆ ತೀವ್ರ ತೊಂದರೆಯಾಗಿದೆ ಎಂದು ಆರೋಪಿಸಿ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಆರೈಕೆ ಕೇಂದ್ರದಲ್ಲಿ ಅವ್ಯವಸ್ಥೆ

ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕೋವಿಡ್​ ಕೇರ್​ ಸೆಂಟರ್​ ತೆರೆಯಲಾಗಿದೆ.

ಸ್ಯಾನಿಟೈಸ್ ಮಾಡದೆ ಇರುವುದರಿಂದ ಹೊಸದಾಗಿ ರೋಗಿಗಳನ್ನು ತಂದು ಇಲ್ಲಿ ಬಿಡುತ್ತಿದ್ದಾರೆ. ಗುಣಮುಖರಾದವರು ಕೂಡ ಪುನಃ ಸೋಂಕಿಗೆ ಒಳಗಾಗುವಂತಹ ಸ್ಥಿತಿ ಇದೆ.

ಬೆಳಗ್ಗೆ 7 ಗಂಟೆ ಆದ್ರೂ ಬಿಸಿನೀರಿನ ವ್ಯವಸ್ಥೆ ಇರುವುದಿಲ್ಲ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಅಡುಗೆ ಮನೆಯಲ್ಲಿಯೂ ಸ್ವಚ್ಛತೆ ಕಾಪಾಡಿಲ್ಲ.

ಇದರಿಂದಾಗಿ ಕೋವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಹೀಗಾಗಿ, ಹೋಂ ಕ್ವಾರಂಟೈನ್​ಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಸೋಂಕಿತರು ಒತ್ತಾಯಿಸಿದ್ದಾರೆ.

ಸುಶಾಂತ್​ ಸಿಂಗ್​ ಸಾವು ಪ್ರಕರಣ: ಇಬ್ಬರು ಕೆಲಸಗಾರರ ವಿಚಾರಣೆ ನಡೆಸಿದ ಎನ್​ಸಿಬಿ

ABOUT THE AUTHOR

...view details