ತುಮಕೂರು: ಸಚಿವರುಗಳು ನ್ಯಾಯಾಲಯಕ್ಕೆ ಹೋಗಿದ್ದು, ಇದರ ಅವಶ್ಯಕತೆ ಇತ್ತಾ ಎನ್ನುವುದರ ಕುರಿತು ನಮಗೂ ಗೊಂದಲವಿದೆ ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ತಿಪಟೂರು ತಾಲೂಕಿನ ಕಾಡಸಿದ್ದೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಮೊರೆ ಹೋಗಿರುವ ಅವರೇ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ಯಾವ ವಿಚಾರ, ಇಲಾಖೆಯದ್ದಾ ಅಥವಾ ವೈಯಕ್ತಿಕ ವಿಚಾರವೇ ಎಂದು ಅವರೇ ಸ್ಪಷ್ಟಿಕರಿಸಬೇಕು. ಅವರು ಸ್ಪಷ್ಟೀಕರಣ ನೀಡದೇ ನಾವು ಊಹೆ ಮಾಡಿಕೊಂಡು ಹೇಳೋದು ತಪ್ಪಾಗುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಜನಸೇವೆ ಮಾಡುವ ಅವಕಾಶ ಸಿಗಲ್ಲ. ಕೆಲವೇ ಕ್ಷಣಗಳಲ್ಲಿ ಏನು ಬೇಕಾದರೂ ಸಂಭವಿಸಬಹುದು. ಹಾಗಾಗಿ ಎಚ್ಚರ ವಹಿಸಬೇಕು ಎಂದರು. ಪಬ್ಲಿಕ್ನಲ್ಲಿ ಈ ಬಗ್ಗೆ ಮಾತನಾಡುತ್ತಿರುವುದು ಸರಿ ಎನ್ನಿಸುತ್ತಿಲ್ಲ. ರಮೇಶ್ ಜಾರಕಿಹೊಳಿ ವಿಚಾರವೇ ಸಾಕಷ್ಟು ಗೊಂದಲ ಮೂಡಿಸುತ್ತಿದೆ, ವಿಚಾರಣೆಯಾಗಬೇಕು. ಹೇಗೆ ಭಾಗಿಯಾಗಿದ್ದಾರೆ ಎಂಬ ಬಗ್ಗೆಯೂ ವಿಚಾರಣೆ ನಡೆಯಬೇಕಿದೆ. ಏನೇ ಇದ್ದರೂ ಅವರ ಪರ ವಹಿಸಲು ಹಾಗೂ ಬೆಂಬಲಿಸಲು ಸಾಧ್ಯವಿಲ್ಲ ಎಂದರು.
ಓದಿ:ಕೋರ್ಟ್ ಮೊರೆ ಹೋದ ಸಚಿವರ ಕುರಿತು ಏನೂ ಹೇಳಲ್ಲ: ಶೋಭಾ ಕರಂದ್ಲಾಜೆ
ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಸರ್ಕಾರ ಅದನ್ನು ಸ್ವೀಕಾರ ಮಾಡಿದೆ. ತನಿಖೆಯಾಗಿ ಒಂದು ಹಂತಕ್ಕೆ ಬರಬೇಕಿದೆ. ಯಾವ ವಿಚಾರಕ್ಕೆ ಕೋರ್ಟ್ಗೆ ಹೋದರೆಂದು ಗೊತ್ತಿಲ್ಲ. ಈ ಬಗ್ಗೆ ತಿಳಿಯದೇ ಮಾತನಾಡುವುದು ಸೂಕ್ತವಲ್ಲ. ನಾಳೆ ಕಲಾಪ ಇದೆ. ಅವರಿಗೆ ಅವರೇ ವಿವಾದ ಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.