ಕರ್ನಾಟಕ

karnataka

ETV Bharat / state

ವಿಳಾಸ ಕೇಳುವ ನೆಪದಲ್ಲಿ ಮಹಿಳೆಗೆ ಖಾರದಪುಡಿ ಎರಚಿ ಸರಗಳ್ಳತನ - ಕಣ್ಣಿಗೆ ಖಾರದಪುಡಿ ಎರಚಿ ಸರಗಳ್ಳತನ

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೆದ್ಲಹಳ್ಳಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆ ಬಳಿ ವಿಳಾಸ ಕೇಳುವ ನೆಪದಲ್ಲಿ ಬಂದ ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಸರ ಎಗರಿಸಿ ಪರಾರಿಯಾಗಿದ್ದಾರೆ.

chain-snatching-case-registered-in-tumkur
ಕಣ್ಣಿಗೆ ಖಾರದಪುಡಿ ಎರಚಿ ಸರಗಳ್ಳತನ

By

Published : Jul 16, 2021, 5:39 PM IST

ತುಮಕೂರು: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸಮೀಪ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ, ಕೊರಳಲ್ಲಿದ್ದ ಚಿನ್ನದ ಸರ ಅಪಹರಿಸಿರುವ ಘಟನೆ ತಿಪಟೂರು ತಾಲೂಕಿನ ಗೆದ್ಲಹಳ್ಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಅಂಬಿಕಾ ಎಂಬವರು ಸುಮಾರು 17 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾರೆ. ಗ್ರಾಮದ ಕೆರೆ ಏರಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾದ ಹಿಂಬಾಲಿಸಿದ ದುಷ್ಕರ್ಮಿಗಳು, ಚಂದನ್ ಎಂಬುವರ ಮನೆಯ ವಿಳಾಸ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ, ಗ್ರಾಮದೊಳಗೆ ಹೋಗಿ ಕೇಳ್ರಪ್ಪಾ ಎಂದರಂತೆ. ಈ ಸಮಯದಲ್ಲಿ ಹುಡುಗನೊಬ್ಬ ಕಣ್ಣಿಗೆ ಖಾರದಪುಡಿ ಎರಚಿದ್ದಾನೆ. ಬಳಿಕ ಕೊರಳಿನಲ್ಲಿದ್ದ ಸರ ಕಿತ್ತುಕೊಂಡು ಬೈಕ್​ನಲ್ಲಿ ಗೆದ್ಲಹಳ್ಳಿ ಊರೆಡೆ ಪರಾರಿಯಾದರು ಎಂದು ಮಹಿಳೆ ತಿಳಿಸಿದ್ದಾರೆ.

'ನನ್ನ ಕೊರಳಿನಲ್ಲಿ 35 ಗ್ರಾಂ ತೂಕದ ಎರಡು ಎಳೆ ಚಿನ್ನದ ಸರವಿತ್ತು. ಅದರಲ್ಲಿ 17 ಗ್ರಾಂ ತೂಕದ ಒಂದು ಎಳೆ ಸರವನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಉಳಿದ 18 ಗ್ರಾಂ ತೂಕದ ಚಿನ್ನದ ಸರ ನನ್ನ ಕೊರಳಿನಲ್ಲಿದೆ. ಈ ಸರವನ್ನು ಸುಮಾರು 10 ವರ್ಷಗಳ ಹಿಂದೆ ಮಾಡಿಸಲಾಗಿದೆ. ಕಳವಾಗಿರುವ ಸರದ ಅಂದಾಜು ಬೆಲೆ 32 ಸಾವಿರ ರೂ. ಆಗಬಹುದು' ಎಂದು ಅಂಬಿಕಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹೊನ್ನವಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೈಕ್​ನಲ್ಲಿ ಅಕ್ರಮವಾಗಿ ಪಡಿತರ ಹೊತ್ತೊಯ್ಯುವಾಗ ಪೊಲೀಸರ ದಾಳಿ, ಮೂವರ ಬಂಧನ

ABOUT THE AUTHOR

...view details