ತುಮಕೂರು: ಪೊಲೀಸರ ಸೋಗಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅಮೃತೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದೇವಲಾಪುರ ಹೋಬಳಿಯ ದೊಡ್ಡ ಚಿಕ್ಕನಹಳ್ಳಿ ಗ್ರಾಮದ ಪ್ರದೀಪ ಬಂಧಿತ ಆರೋಪಿ. ಈತ ತಾನು ಪೊಲೀಸ್ ಎಂದು ಹೇಳಿಕೊಂಡು ನಿರ್ಜನ ಪ್ರದೇಶಕ್ಕೆ ಮಹಿಳೆ ಕರೆದೊಯ್ದು ಅತ್ಯಾಚಾರ ನಡೆಸಿ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದನು.
ಆರೋಪಿ ಆಗಸ್ಟ್ 1ರಂದು ಚಿಕ್ಕಲ್ಯಾ ಗ್ರಾಮದ ಮಹಿಳೆಯೊಬ್ಬರನ್ನು ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು, ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಿಮ್ಮನ್ನು ಠಾಣೆಗೆ ಕರೆತರಲು ಸಬ್ಇನ್ಸ್ಪೆಕ್ಟರ್ ಹೇಳಿದ್ದಾರೆ ಎಂದು ಭಯ ಹುಟ್ಟಿಸಿ, ಬಲವಂತದಿಂದ ಬೈಕ್ನಲ್ಲಿ ಮಹಿಳೆಯನ್ನು ಯಡಿಯೂರು ಬಳಿಯ ಶ್ರೀನಿವಾಸದೇವರ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದನು.