ತುಮಕೂರು:ಲಾಕ್ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕುಸಿದಿದ್ದು, ಮಾರ್ಚ್ನಿಂದ ಈವರೆಗೂ 14 ಸರಗಳ್ಳತನ ಪ್ರಕರಣಗಳು ಮಾತ್ರ ದಾಖಲಾಗಿವೆ. ತುಮಕೂರು ತಾಲೂಕಿನಲ್ಲಿ 6, ಕುಣಿಗಲ್ 4, ಶಿರಾ ಮತ್ತು ಪಾವಗಡದಲ್ಲಿ ತಲಾ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ತುಮಕೂರಲ್ಲಿ ಲಾಕ್ಡೌನ್ ವೇಳೆ ಕಡಿಮೆಯಾದ ಸರಗಳ್ಳತನ ಪ್ರಕರಣಗಳು! - ಸರಗಳ್ಳತನ ಪ್ರಕರಣಗಳು
ಲಾಕ್ಡೌನ್ ಸಂದರ್ಭದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ತೀವ್ರ ಕುಸಿದಿದ್ದು, ಮಾರ್ಚ್ನಿಂದ ಈವರೆಗೂ ಕೇವಲ 14 ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.
ಸರಗಳ್ಳತನ
ಇಲ್ಲಿಯವರೆಗೂ 7 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡು ಜೀವನ ನಿರ್ವಹಣೆಗಾಗಿ ಈ ಕಾರ್ಯಗಳಿಗೆ ಇಳಿದಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾರೆ.