ತುಮಕೂರು :ಪೆಗಾಸಸ್ ಕಂಪನಿ ನೇರವಾಗಿ ಬಂದು ಫೋನ್ ಟ್ಯಾಪ್ ಮಾಡಲು ಸಾಧ್ಯವಿಲ್ಲ. ಟ್ಯಾಪ್ ಮಾಡಬೇಕಾದರೆ ಪ್ರಸ್ತುತ ಸರ್ಕಾರದ ಅನುಮತಿ ಬೇಕಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಟ್ಟಿರಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಆರೋಪಿಸಿದ್ದಾರೆ.
ನಗರದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಗೃಹ ಖಾತೆ ಕಾರ್ಯದರ್ಶಿಯವರು ಅನುಮತಿ ನೀಡುತ್ತಾರೆ. ಇಂದು ಹೊರ ದೇಶದ ಪೆಗಾಸಸ್ ಬಂದು ಟ್ಯಾಪ್ ಮಾಡ್ತಾರೆ ಅಂದರೆ ಸರ್ಕಾರವೇ ಅನುಮತಿ ನೀಡಿರುತ್ತದೆ ಎಂದರು.
ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಕೇಂದ್ರ ಸರ್ಕಾರ ನಮ್ಮ ರಕ್ಷಣೆ ಮಾಡುತ್ತಿದೆಯೋ, ಇಲ್ಲವೋ ಎಂಬ ಅನುಮಾನ ಮೂಡಿದೆ. ಅಂದಿನ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಹಾಗೂ ನನ್ನ ಫೋನ್ ಟ್ಯಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಕಾನೂನಿಗೆ ವಿರೋಧ ಎಂದರು.