ತುಮಕೂರು/ಪಾವಗಡ:ವೈಕುಂಠ ಏಕದಾಶಿಯ ಪ್ರಯುಕ್ತ ತುಮಕೂರು ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಗಿತ್ತು. ನಗರರದ ಬಟವಾಡಿ ಪ್ರದೇಶದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇಗುಲದ ಮೂರ್ತಿಗೆ ತಿರುಪತಿಯಿಂದ ಬಂದಿದ್ದ ದೇವಸ್ಥಾನದ ಸಿಬ್ಬಂದಿ ವಿಶೇಷ ಅಲಂಕಾರ ನೆರವೇರಿಸಿದರು.
ವೈಕುಂಠ ಏಕಾದಶಿ: ತುಮಕೂರಲ್ಲಿ ವಿಶೇಷ ಪೂಜೆ, ತಿರುಪತಿ ಲಡ್ಡು ವಿತರಣೆ - tumkur Vaikunta Ekadashi celeberation
ತುಮಕೂರು ನಗರದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿನ ಮೂರ್ತಿಗೆ ವೈಕುಂಟ ಏಕಾದಶಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಡಿಸಲಾಗಿತ್ತು. ಇದೇ ಏಕದಾಶಿಗಾಗಿ ತರಿಸಲಾಗಿದ್ದ ತಿರುಪತಿಯ ಲಡ್ಡುಗಳನ್ನು ಭಕ್ತರಿಗೆ ವಿತರಿಸಲಾಯಿತು.

ವೈಕುಂಟ ಏಕಾದಶಿ
ತುಮಕೂರು ನಗರದಲ್ಲಿ ವೈಕುಂಟ ಏಕಾದಶಿಯ ಸಂಭ್ರಮ
ಪಾವಗಡ ಪಟ್ಟಣದ ಬಜಂತ್ರಿ ಬೀದಿಯಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಸಹ ವಿಶೇಷ ಪೂಜಾ ಕಾರ್ಯಕ್ರಮಗಳು ಏರ್ಪಡಿಸಿದ್ದು, ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಪುರಸಭಾ ಮಾಜಿ ಸದಸ್ಯರಾದ ಜಿ.ಎ. ವೆಂಕಟೇಶ್ ಮಾತನಾಡಿ, 'ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ವೈಕುಂಠ ಏಕಾದಶಿಯಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು
ಇನ್ನು ಏಕಾದಶಿಯಂದು ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದು, ಹಲವು ವರ್ಷಗಳಿಂದ ಏಕಾದಶಿಯಂದು ದೇವಾಲಯಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಾಡು ವಿತರಿಸಲಾಯಿತು.