ತುಮಕೂರು:ಜಾನುವಾರು ಕಳ್ಳತನ ಮಾಡುತ್ತಿದ್ದ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದಿರುವ ಘಟನೆ ತುಮಕೂರು ತಾಲೂಕು ಹೆಬ್ಬೂರಿನ ತಿಮ್ಮಪ್ಪನಪಾಳ್ಯದಲ್ಲಿ ನಡೆದಿದೆ.
ಜಾನುವಾರು ಕಳ್ಳತನ ಆರೋಪ: ವ್ಯಕ್ತಿಯೊಬ್ಬನ ಬಂಧನ - ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾಣುವಾರು ಕಳ್ಳತನ
ತುಮಕೂರು ತಾಲೂಕು ಹೆಬ್ಬೂರಿನ ತಿಮ್ಮಪ್ಪನಪಾಳ್ಯದಲ್ಲಿ ಜಾನುವಾರು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಾನುವಾರು ಕಳ್ಳತನ ಆರೋಪ
ಗ್ರಾಮದ ಸುತ್ತಮುತ್ತ ಹಲವು ದಿನಗಳಿಂದ ಹಸುಗಳನ್ನು ಕಳ್ಳತನ ಮಾಡಿ, ನಾಗವಲ್ಲಿ ಗ್ರಾಮದ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದೆ ಎಂದು ಆರೋಪಿಯೇ ಒಪ್ಪಿಕೊಂಡಿದ್ದಾನೆ. ಈ ಆಧಾರದ ಮೇಲೆ ಗ್ರಾಮಸ್ಥರೇ ಆರೋಪಿಯನ್ನು ಹೆಬ್ಬೂರು ಪೊಲೀಸರಿಗೆ ಒಪ್ಪಿಸಿದ್ದಾರೆ.