ತುಮಕೂರು:ಜಿಲ್ಲೆಯಲ್ಲಿ ಖಾಸಗಿ ವಾಹಿನಿಯ ಲೋಗೋ ದುರ್ಬಳಕೆ ಮಾಡಿಕೊಂಡು ಕೊರೊನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿದ್ದವರ ವಿರುದ್ಧ ತುಮಕೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಾಹಿನಿಯ ಲೋಗೋ ಬಳಸಿ ಕೊರೊನಾ ವೈರಸ್ ಬಗ್ಗೆ ಸುಳ್ಳುಸುದ್ದಿ: ಕೇಸ್ ದಾಖಲು - ಕೊರೊನಾ ವೈರಸ್
ಖಾಸಗಿ ಸುದ್ದಿವಾಹಿನಿಯ ಲೋಗೋ ಬಳಸಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿ ವೈರಲ್ ಮಾಡಿದ್ದವರ ವಿರುದ್ಧ ತುಮಕೂರಿನಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ ದಾಖಲು
ಹಾಲುಮತ ಮಹಾಸಭಾ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಅಡ್ಮಿನ್ ಹಾಗೂ ಸುಳ್ಳು ಸುದ್ದಿಯನ್ನ ಫಾರ್ವಡ್ ಮಾಡಿದ್ದ ರವೀಶ್ ಮತ್ತು ನಿಡಗಲ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಫಾರ್ವಡ್ ಮಾಡಿದ್ದ ಸಂದೀಪ್, ಶ್ರೀನಿವಾಸ್, ಗೋವಿಂದರಾಜು ಹಾಗೂ ತಿಪ್ಪೇಸ್ವಾಮಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ' ಪಾವಗಡ ನರೇಶ್ ರೆಡ್ಡಿ ಎನ್ನುವವರಿಗೆ ಕೊರೊನಾ ಸೋಂಕು ತಗುಲಿದೆ' ಎಂದು ಖಾಸಗಿ ವಾಹಿನಿಯ ಸ್ಕ್ರೀನ್ ಮಾದರಿ ಬಳಸಿಕೊಂಡು ಸುಳ್ಳು ಸುದ್ದಿಯನ್ನು ವೈರಲ್ ಮಾಡಲಾಗಿತ್ತು.