ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ಸುರೇಶ್​ ಕೊಲೆಗೆ ಸಂಚು ಆರೋಪ: ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ಎಫ್​ಐಆರ್ - ಶಾಸಕ ಗೌರಿಶಂಕರ್ ಸೇರಿದಂತೆ ಮೂವರ ವಿರುದ್ಧ ಎಫ್​ಐಆರ್

ತುಮಕೂರು ಗ್ರಾಮಾಂತರ ವಿಧಾನಸಭೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ನೀಡಿದ ದೂರಿನಂತೆ ಹಾಲಿ ಜೆಡಿಎಸ್ ಶಾಸಕ ಗೌರಿಶಂಕರ್ ಸೇರಿದಂತೆ ಮೂವರ ವಿರುದ್ಧ ಎಫ್​ಐಆರ್​​ ದಾಖಲಾಗಿದೆ.

case-against-jds-mla-gaurishankar-in-murder-supari-allegation
ಮಾಜಿ ಶಾಸಕ ಸುರೇಶ್​ ಕೊಲೆಗೆ ಸಂಚು ಆರೋಪ: ಶಾಸಕ ಗೌರಿಶಂಕರ್ ಸೇರಿ ಮೂವರ ವಿರುದ್ಧ ಎಫ್​ಐಆರ್

By

Published : Nov 25, 2022, 8:17 PM IST

ತುಮಕೂರು:ಕೊಲೆಗೆ ಸುಪಾರಿ ನೀಡಿದ ಸಂಬಂಧ ತುಮಕೂರುಗ್ರಾಮಾಂತರ ವಿಧಾನಸಭೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ನೀಡಿದ ದೂರಿನಂತೆ ಹಾಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಸೇರಿದಂತೆ ಮೂವರ ವಿರುದ್ಧ ಎಫ್​ಐಆರ್​​ ದಾಖಲಾಗಿದೆ. ಈ ಬಗ್ಗೆ ಸುರೇಶ್​ ಗೌಡ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನವೆಂಬರ್​​ 23ರಂದು ದೂರು ದಾಖಲಿಸಿದ್ದರು.

ತಮ್ಮನ್ನು ಕೊಲೆ ಮಾಡಲು ಶಾಸಕ ಡಿ.ಸಿ ಗೌರಿ ಶಂಕರ್ ಅವರ ಆಪ್ತ ಹಿರೇಹಳ್ಳಿ ಮಹೇಶ್, ರೌಡಿಶೀಟರ್ ಒಬ್ಬನಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಗೌರಿಶಂಕರ್, ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ಹಾಗೂ ವಕೀಲ ಹಾಗೂ ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ರಾಜಕೀಯ ದ್ವೇಷದಿಂದ ಗೌರಿಶಂಕರ್ ಅವರ ಆಪ್ತ ಹಿರೇಹಳ್ಳಿ ಮಹೇಶ್ ಅವರು ನನ್ನನ್ನು ಕೊಲ್ಲಲು ಜೈಲಿನಲ್ಲಿರುವ ವ್ಯಕ್ತಿಗೆ 5 ಕೋಟಿ ರೂಪಾಯಿ ಸುಪಾರಿ ನೀಡಿದ್ದಾರೆ. ತುಮಕೂರಿನ ಮಾಜಿ ಮೇಯರ್ ಕೊಲೆ ಪ್ರಕರಣ ಹಾಗೂ ಬೇರೆ ಬೇರೆ ಅಪರಾಧಿ ಆಗಿ ಜೈಲಿನಲ್ಲಿರುವ ವ್ಯಕ್ತಿಗೆ ಸುಪಾರಿ ನೀಡಲಾಗಿದೆ. ಈ ಹಣವನ್ನು ಶಾಸಕ ಡಿ.ಸಿ ಗೌರಿಶಂಕರ್ ಹಾಗೂ ಬೊಮ್ಮನಹಳ್ಳಿ ಬಾಬು ನೀಡುತ್ತಾರೆ ಎಂದು ಸುಪಾರಿ ನೀಡಿದಾತನಿಗೆ ತಿಳಿಸಲಾಗಿದೆ ಎಂದು ಸುರೇಶ್ ಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ತಮಗೆ ರಕ್ಷಣೆ ನೀಡುವಂತೆ ಎಸ್​ಪಿ ಮೊರೆ ಹೋದ ಜೆಡಿಎಸ್ ಶಾಸಕ ಗೌರಿಶಂಕರ್!

ABOUT THE AUTHOR

...view details