ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದಲ್ಲಿ ಅವ್ಯಾಹತ ಇಸ್ಪೀಟ್ ದಂಧೆ : ಹಾಡಹಗಲೇ ಓಡಾಡಲು ಹೆದರುತ್ತಿರೋ ಮಹಿಳೆಯರು - ಇಸ್ಪೀಟ್ ದಂಧೆ

ಕೆಲ ಪುಡಿರೌಡಿಗಳು, ಪುಡಾರಿಗಳು ತುಮಕೂರು ತಾಲೂಕಿನ ವಿವಿಧ ಗ್ರಾಮೀಣ ಭಾಗದ ಬಯಲು ಪ್ರದೇಶಗಳಿಗೆ ಬಂದು ಹಾಡಹಗಲೇ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ. ಪಾನಮತ್ತರಾಗಿ ಓಡಾಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರು ಒಬ್ಬಂಟಿಯಾಗಿ ಹಾಡಹಗಲೇ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ..

cards-gambling-in-tumkur-rural-area
ಇಸ್ಪೀಟ್ ದಂಧೆ

By

Published : Aug 27, 2021, 6:37 PM IST

ತುಮಕೂರು :ನಗರದ ಹೊರವಲಯದ ಗ್ರಾಮೀಣ ಭಾಗದ ಬಯಲು ಪ್ರದೇಶದಲ್ಲಿ ಹಾಡುಹಗಲೇ ಇಸ್ಪೀಟ್‌ನಂತಹ ಜೂಜಾಟ ಹಾಗೂ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಮಹಿಳೆಯರು ಒಂಟಿಯಾಗಿ ಓಡಾಡಲು ಹಿಂಜರಿಯುತ್ತಿದ್ದಾರೆ.

ನೆಲಮಂಗಲ ಹಾಗೂ ಬೆಂಗಳೂರಿನ ಕೆಲವು ಪುಡಿರೌಡಿಗಳು, ಪುಡಾರಿಗಳು ತುಮಕೂರು ತಾಲೂಕಿನ ವಿವಿಧ ಗ್ರಾಮೀಣ ಭಾಗದ ಬಯಲು ಪ್ರದೇಶಗಳಿಗೆ ಬಂದು ಹಾಡಹಗಲೇ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ. ಪಾನಮತ್ತರಾಗಿ ಓಡಾಡುತ್ತಿದ್ದಾರೆ.

ನಿತ್ಯ ಗುಂಪು ಗುಂಪಾಗಿ ಬರುವ ದಂಧೆಕೋರರು ದೇವರಾಯನದುರ್ಗ, ಇಕಲಪ್ಪನ ಬೆಟ್ಟಕ್, ಬ್ಯಾತ, ಹಿರೇಹಳ್ಳಿ, ಸಿರವಾರ, ಬೆಳಗುಂಬ ಗ್ರಾಮದ ಬಯಲಲ್ಲಿ ಮೋಜು-ಮಸ್ತಿಯಲ್ಲಿ ಮುಳುಗುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅವ್ಯಾಹತ ಇಸ್ಪೀಟ್ ದಂಧೆ.. ಈ ಬಗ್ಗೆ ಶಾಸಕ ಗೌರಿ ಶಂಕರ್ ಹೀಗಂತಾರೆ..

ನಿತ್ಯ ಲಕ್ಷಾಂತರ ರೂ. ಇಸ್ಪೀಟು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅಲ್ಲದೆ ಮದ್ಯದ ಮದಲ್ಲಿ ಮೋಜು-ಮಸ್ತಿ ಮಾಡುವ ಪುಡಾರಿಗಳನ್ನು ಕಂಡು ಗ್ರಾಮೀಣ ಭಾಗದ ಮಹಿಳೆಯರು ಒಬ್ಬಂಟಿಯಾಗಿ ಹಾಡಹಗಲೇ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ.

ದನ ಮೇಯಿಸಲು ಹೋದ ಮಹಿಳೆ ಮೇಲೆ ಅತ್ಯಾಚಾರ, ಕೊಲೆ

ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಹಿರೇಹಳ್ಳಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ದನ ಮೇಯಿಸಲು ಹಾಗೂ ಒಬ್ಬಂಟಿಯಾಗಿ ತಿರುಗಾಡಲು ಮಹಿಳೆಯರು ಹಿಂಜರಿಯುತ್ತಿದ್ದಾರೆ. ಸದ್ಯ ಗ್ರಾಮೀಣ ಭಾಗದ ಬಯಲು ಪ್ರದೇಶಗಳಲ್ಲಿ ನಡೆಯುತ್ತಿರುವ ಇಂತಹ ಅಕ್ರಮ ಚಟುವಟಿಗಳಿಂದ ಸುತ್ತಮುತ್ತಲಿನ ಗ್ರಾಮದ ಮಹಿಳೆಯರು ಭಯಭೀತರಾಗಿದ್ದಾರೆ.

ಜನರಿಗೆ ಪೊಲೀಸ್​ ಅಭಯ

ಇನ್ನೊಂದೆಡೆ ಕಳೆದ ಒಂದು ವರ್ಷದಿಂದ ಎರಡು ಅತ್ಯಾಚಾರ ಪ್ರಕರಣ ನಡೆದಿರುವುದರಿಂದ ಗ್ರಾಮೀಣ ಭಾಗದಲ್ಲಿ ಇಂತಹ ಭಯಭೀತ ವಾತಾವರಣ ಹೋಗಲಾಡಿಸಲು ಪೊಲೀಸರು ನಿರಂತರವಾಗಿ ಗಸ್ತು ಆರಂಭಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಹೊರ ಜಿಲ್ಲೆಯಿಂದ ಬರುತ್ತಿರುವಂತಹ ಹಾಗೂ ಗ್ರಾಮೀಣ ಭಾಗದ ಬಯಲು ಪ್ರದೇಶಗಳಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿರುವ ವ್ಯಕ್ತಿಗಳ ಮಟ್ಟ ಹಾಕಲು ಗಂಭೀರ ಚಿಂತನೆ ನಡೆಸಿದ್ದಾರೆ. ಗ್ರಾಮೀಣ ಭಾಗದ ಜನರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ಭಯ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡುತ್ತೇವೆ ಎಂಬ ಅಭಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀಡಿದ್ದಾರೆ.

ABOUT THE AUTHOR

...view details