ತುಮಕೂರು:ಕಾರು ಮತ್ತು ಬೈಕ್ ನಡುವೆ ಡಿಕ್ಕಿ (Accident) ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚಿಕ್ಕಪಾಲನಹಳ್ಳಿ ಗೇಟ್ ಬಳಿ ನಡೆದಿದೆ.
ಕಾರು, ಬೈಕ್ ಡಿಕ್ಕಿ: ಸವಾರರಿಬ್ಬರು ಸಾವು - ಕಾರು-ಬೈಕ್ ಅಪಘಾತ
ಅಪಘಾತದಲ್ಲಿ (Accident) ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಕೊರಟಗೆರೆ ತಾಲೂಕಿನ ಚಿಕ್ಕ ಪಾಲನಹಳ್ಳಿ ಗೇಟ್ ಬಳಿ ನಡೆದಿದೆ..
ಮೃತರನ್ನು ಮಧುಗಿರಿ ತಾಲೂಕಿನ ಕೋಳಾಲ ಹೋಬಳಿಯ ಎ.ವೆಂಕಟಾಪುರದ ಗ್ರಾಮದ ಲೋಕೇಶ್(20), ನರೇಂದ್ರ(35) ಎಂದು ಗುರುತಿಸಲಾಗಿದೆ. ಬೆಂಗಳೂರು – ಮಧುಗಿರಿ ರಾಜ್ಯ ಹೆದ್ದಾರಿಯ ಕೋಳಾಲ ಹೋಬಳಿಯ ಚಿಕ್ಕ ಪಾಲನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ನರೇಂದ್ರ ಎಂಬಾತನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಆಟೋದಲ್ಲಿ ಕೊರಟಗೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ಕರತರಲಾಗಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಸಂಜಯ್ ಗಾಂಧಿ ಆಸ್ಪತ್ರೆಗೆ ಹೋಗುವಾಗ ಮಾರ್ಗ ಮಧ್ಯೆ ನೆಲಮಂಗಲ ಟೋಲ್ ಬಳಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.