ಕರ್ನಾಟಕ

karnataka

ETV Bharat / state

ಲಾರಿ-ಕ್ಯಾಂಟರ್​ ಡಿಕ್ಕಿ: ಪಾದಚಾರಿ ಸಾವು - Truck accident near Tumkur

ಶಿರಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಎರಡು ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಪರಿಣಾಮ ಎರಡೂ ವಾಹನದಲ್ಲಿದ್ದ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

canter-lorry-accident-near-thimmarajanahalli-village-of-tumkur
ಲಾರಿ-ಕ್ಯಾಂಟರ್​ ಡಿಕ್ಕಿ

By

Published : Mar 21, 2021, 10:29 PM IST

ತುಮಕೂರು: ಕ್ಯಾಂಟರ್​ಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮೇಲೆ ಉರುಳಿ ಬಿದ್ದು ಆತ ಮೃತಪಟ್ಟಿರುವ ಘಟನೆ ತಾಲೂಕಿನ ತಿಮ್ಮರಾಜನಹಳ್ಳಿ ಗ್ರಾಮದ ಬಳಿ ನಡೆದಿದೆ.

ತುಮಕೂರಿನ ತಿಮ್ಮರಾಜನಹಳ್ಳಿ ಬಳಿ ಅಪಘಾತ

ಶಿರಾದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಎರಡು ವಾಹನಗಳು ಅಪಘಾತಕ್ಕೆ ಒಳಗಾಗಿವೆ. ಕ್ಯಾಂಟರ್​ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿರುವ ಪರಿಣಾಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಸಂಪೂರ್ಣ ಮಗುಚಿ ಬಿದ್ದಿದೆ. ಪರಿಣಾಮ ಎರಡೂ ವಾಹನದಲ್ಲಿದ್ದ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ:ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ: ಮೂವರ ಸಾವು

ಅಪಘಾತದಿಂದಾಗಿ ಎರಡು ವಾಹನಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಆದರೆ ಇದುವರೆಗೂ ಮೃತಪಟ್ಟಿರುವ ಪಾದಚಾರಿ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಈ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details