ತುಮಕೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೇಣದ ಬತ್ತಿ ಹಚ್ಚಿ ತುಮಕೂರಲ್ಲಿ ಮೌನಾಚರಣೆ ಮಾಡಲಾಯಿತು.
ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೋರಿ ತುಮಕೂರಲ್ಲಿ ಮೌನಾಚರಣೆ - ಇಂಜಿನಿಯರಿಂಗ್ ವಿದ್ಯಾರ್ಥಿನಿ'
ತುಮಕೂರಿನ ಅಮಾನಿಕೆರೆ ಪಾರ್ಕ್ ಮುಂಭಾಗದಲ್ಲಿ ಎಐಎಂಎಸ್ಎಸ್ ಮತ್ತು ಮಹಿಳಾ ಪರ ಸಂಘಟನೆಗಳು ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಮೇಣದ ಬತ್ತಿ ಹಚ್ಚಿ ಮೌನಾಚರಣೆ ನಡೆಸಿದರು.
ಮೌನಾಚರಣೆ
ನಗರದ ಅಮಾನಿಕೆರೆ ಪಾರ್ಕ್ ಮುಂಭಾಗದಲ್ಲಿ ಎಐಎಂಎಸ್ಎಸ್ ಸಂಘಟನೆ ಮತ್ತು ಮಹಿಳಾ ಪರ ಸಂಘಟನೆಗಳು ವಿದ್ಯಾರ್ಥಿನಿ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಆಕೆಯ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡಲಿ ಎಂದು ಒತ್ತಾಯಿಸಿ ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಇನ್ನು ಅಂತರ್ಜಾಲದಲ್ಲಿ ಬರುತ್ತಿರುವಂತಹ ಅಶ್ಲೀಲ ವಿಡಿಯೋಗಳನ್ನು ತೆಗೆದು ಹಾಕಬೇಕು. ಆ ಮೂಲಕ ಇಂತಹ ಹೀನ ಕೃತ್ಯಗಳನ್ನು ನಿಯಂತ್ರಿಸಬೇಕು ಎಂದು ಎಐಎಂಎಸ್ಎಸ್ ಸದಸ್ಯರಾದ ಕಲ್ಯಾಣಿ ಆಗ್ರಹಿಸಿದರು.