ತುಮಕೂರು:ಬೀದರ್ - ಶ್ರೀರಂಗಪಟ್ಟಣ 150 A ರಾಷ್ಟ್ರೀಯ ಹೆದ್ದಾರಿ ನಡುವೆ ಹಾದು ಹೋಗುತ್ತಿರುವ ಮಾರ್ಗದ ಸರ್ವೇ ಕಾರ್ಯವನ್ನು ಪೊಲೀಸ್ ಭದ್ರತೆ ನಡುವೆ ನಡೆಸಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪೋಚಕಟ್ಟೆ ಗ್ರಾಮದಲ್ಲಿ ನಡೆದಿದೆ,
ಪೊಲೀಸ್ ಭದ್ರತೆಯಲ್ಲಿ ಬೈಪಾಸ್ ರಸ್ತೆ ಸರ್ವೇ ಕಾರ್ಯ - Bypass News of tumkur
ಬೀದರ್ - ಶ್ರೀರಂಗಪಟ್ಟಣ 150 A ರಾಷ್ಟ್ರೀಯ ಹೆದ್ದಾರಿ ನಡುವೆ ಹಾದು ಹೋಗುತ್ತಿರುವ ಮಾರ್ಗದ ಸರ್ವೇ ಕಾರ್ಯವನ್ನು ಪೊಲೀಸ್ ಭದ್ರತೆ ನಡುವೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪೋಚಕಟ್ಟೆ ಗ್ರಾಮದಲ್ಲಿ ನಡೆದಿದೆ,

ಹುಳಿಯಾರು ಪಟ್ಟಣದ ಹೊರವಲಯದ ಮೂಲಕ ಹಾದುಹೋಗಲಿರುವ ಬೈಪಾಸ್ ರಸ್ತೆ ಕಾಮಗಾರಿಗೆ ಈಗಾಗಲೇ ಎರಡು ಬಾರಿ ಸರ್ವೆಕಾರ್ಯ ನಡೆಸಲಾಗಿತ್ತು. ಸ್ಥಳೀಯರ ವಿರೋಧ ಹಾಗೂ ರೈತರ ಆಕ್ಷೇಪದ ಹಿನ್ನೆಲೆಯಲ್ಲಿ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿತ್ತು. ಹೀಗಾಗಿ ಹುಳಿಯಾರು ಪಟ್ಟಣದ ಹೊರವಲಯದಲ್ಲಿರುವ ಪೋಚಕಟ್ಟೆಯಿಂದ ಕೆಂಕೆರೆ ಗ್ರಾಮದವರೆಗೆ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಖಾಕಿ ಸರ್ಪಗಾವಲಿನಲ್ಲಿ ಪುನಃ ಸರ್ವೆ ಕಾರ್ಯವನ್ನು ನಡೆಸಲಾಯಿತು.
ಬೈಪಾಸ್ ರಸ್ತೆ ನಿಮಿ೯ಸದಂತೆ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ರೈತರ ಜಮೀನು ಬಳಸಿಕೊಳ್ಳುವ ಬದಲು ಹುಳಿಯಾರು ಪಟ್ಟಣದ ಮೂಲಕ ರಸ್ತೆ ಅಗಲೀಕರಣ ಕೈಗೊಳ್ಳುವಂತೆ ರೈತರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಇಂದು ನಡೆದ ಸರ್ವೇ ಕಾರ್ಯದ ವೇಳೆ ರೈತರು ಹಾಗೂ ಪೊಲೀಸರ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು.