ಕರ್ನಾಟಕ

karnataka

ETV Bharat / state

ಹೆಸರಿನ ಮುಂದೆ 'ಮೋದಿ' ಎಂದು ನಮೂದಿಸಿ: ತಮ್ಮ ಸಮುದಾಯಕ್ಕೆ ಪ್ರಹ್ಲಾದ್‌ ಮೋದಿ ಕರೆ - Prahlad Modi is Narendra Modi's brother

ದೇಶದ ವಿವಿಧೆಡೆ ಬದುಕು ಕಂಡುಕೊಂಡಿರುವ ರಾಜಸ್ಥಾನ ಮತ್ತು ಗುಜರಾತ್ ಮೂಲದ ಜನರು, ತಮ್ಮ ಹೆಸರಿನ ಮುಂದೆ 'ಮೋದಿ' ಎಂದು ನಮೂದಿಸಿಕೊಳ್ಳಿ. ನಂತರ ನಿಮ್ಮ ಗೌರವ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಮ್ಮ ಸಮುದಾಯಕ್ಕೆ ಕರೆ ನೀಡಿದ್ದಾರೆ.

brother-of-prime-minister-prahlad-modi-talk-news
ಪ್ರಹ್ಲಾದ್ ಮೋದಿ

By

Published : Dec 10, 2020, 5:44 PM IST

Updated : Dec 10, 2020, 6:35 PM IST

ತುಮಕೂರು:ನಿಮ್ಮ ಹೆಸರಿನ ಮುಂದೆ 'ಮೋದಿ' ಎಂದು ಸೇರಿಸಿ. ಆಗ ನಿಮಗೆ ಸಿಗುವ ಗೌರವ ತಿಳಿದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಮ್ಮ ಸಮುದಾಯದ ಜನರಿಗೆ ಹೇಳಿದರು.

ತಮ್ಮ ಸಮುದಾಯಕ್ಕೆ ಪ್ರಹ್ಲಾದ್‌ ಮೋದಿ ಕರೆ

ತುಮಕೂರಿನಲ್ಲಿ ತಮ್ಮ ಸಮುದಾಯದ ವತಿಯಿಂದ ನಿರ್ಮಿಸಲ್ಪಟ್ಟಿರುವ ವೈಷ್ಣೋದೇವಿ ದೇಗುಲದಲ್ಲಿನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಮೈಲಿಗಲ್ಲು : 8 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಿದ್ಧತೆ

ನಾವು ಗೌರವ ಪಡೆಯಲು ಕೆಲವೊಂದನ್ನು ಹೆಚ್ಚಿಸಬೇಕಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲೀ ಅಥವಾ ಅವರ ಕುಟುಂಬಕ್ಕಾಗಲೀ ಯಾವುದೇ ರೀತಿಯ ಲಾಭವಿಲ್ಲ. ಬದಲಾಗಿ ಸಮಾಜದ ಗೌರವವನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದರು.

ರಾಥೋಡ್, ಸಾಹೂ, ಜೈಸ್ವಾಲ್ ಈ ರೀತಿಯ ಹೆಸರುಗಳು ಕೇವಲ ಪರಿವಾರವನ್ನು ಗುರುತಿಸಲು ಸಹಕಾರಿಯಾಗುತ್ತದೆ. ಹಾಗಾಗಿ, ತಮ್ಮ ಹೆಸರಿನ ಮುಂದೆ 'ಮೋದಿ' ಎಂದು ನಮೂದಿಸಿ ಸಮುದಾಯದ ಹೆಸರನ್ನು ಪ್ರಚುರಪಡಿಸುವಂತೆ ಪ್ರಹ್ಲಾದ್‌ ಮೋದಿ ಕರೆ ಕೊಟ್ಟರು.

Last Updated : Dec 10, 2020, 6:35 PM IST

ABOUT THE AUTHOR

...view details