ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ ಆಟೋಗೆ ಕಾರು ಡಿಕ್ಕಿ: ಬಾಲಕ ಸಾವು, 8 ಮಂದಿಗೆ ಗಾಯ - ಮುಗಿಲು ಮುಟ್ಟಿದ ಆಕ್ರಂದನ

ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ಯಾಸೆಂಜರ್​ ಆಟೋಗೆ ಕಾರು ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

Boy died and many people injured  Innova car and passenger auto between collide  Accident in Tumkur  ತುಮಕೂರಿನಲ್ಲಿ ಪ್ಯಾಸೆಂಜರ್​ ಆಟೋಗೆ ಕಾರು ಡಿಕ್ಕಿ  ಪ್ಯಾಸೆಂಜರ್​ ಆಟೋಗೆ ಕಾರು ಡಿಕ್ಕಿ  ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ  ಆಟೋದಲ್ಲಿದ್ದ ಓರ್ವ ಬಾಲಕ ಮೃತ  ಪ್ರಯಾಣಿಕರು ಗಾಯಗೊಂಡಿರುವ ಘಟನೆ  ಇನ್ನೋವಾ ಆಟೋ ಮಧ್ಯೆ ಅಪಘಾತ  ರಕ್ಷಣಾ ಕಾರ್ಯ ಕೈಗೊಂಡ ಪೊಲೀಸರು  ಮುಗಿಲು ಮುಟ್ಟಿದ ಆಕ್ರಂದನ  ಕಾರು ಆಟೋ ಸಂಪೂರ್ಣ ಜಖಂ
ತುಮಕೂರಿನಲ್ಲಿ ಪ್ಯಾಸೆಂಜರ್​ ಆಟೋಗೆ ಕಾರು ಡಿಕ್ಕಿ

By

Published : Jan 16, 2023, 11:52 AM IST

ತುಮಕೂರು: ಪ್ಯಾಸೆಂಜರ್ ಆಟೋಗೆ ಇನೋವಾ ಕಾರು ಡಿಕ್ಕಿಯಾಗಿ ಆಟೋದಲ್ಲಿದ್ದ ಓರ್ವ ಬಾಲಕ ಮೃತಪಟ್ಟಿದ್ದಾನೆ. ಇನ್ನುಳಿದಂತೆ, 8 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಟಿಎನ್ ಪೇಟೆ ಬಳಿ ನಡೆದಿದೆ. ಆಟೋದಲ್ಲಿದ್ದ ವರ್ಷಿತ್ ರೆಡ್ಡಿ (13) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.

ಇನ್ನೋವಾ-ಆಟೋ ಮಧ್ಯೆ ಅಪಘಾತ:ಕಳೆದ ರಾತ್ರಿ 10 ಗಂಟೆಯ ಸುಮಾರಿಗೆ ಹತ್ತು ಜನರಿಂದ ತುಂಬಿದ್ದ ಪ್ಯಾಸೆಂಜರ್ ಆಟೋ ಪೆನುಗೊಂಡದಿಂದ ಚಿತ್ರದುರ್ಗ ಕಡೆ ಹೋಗುತ್ತಿತ್ತು. ರೊದ್ದಂಯಿಂದ ಪಾವಗಡ ಕಡೆಗೆ ತೆರಳುತ್ತಿದ್ದಾಗ ಆಟೋ ಮತ್ತು ಇನ್ನೋವಾ ಕಾರ್ ನಡುವೆ ಅಪಘಾತ ಸಂಭವಿಸಿತು. ಬಾಲಕ ವರ್ಷಿತ್​ ರೆಡ್ಡಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಅಸುನೀಗಿದ್ದು, ಅನೇಕರು ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಸ್ಥಳೀಯ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು.

ಸುದ್ದಿ ತಿಳಿದಾಕ್ಷಣ ಪಾವಗಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಹಿಂದೂಪುರ, ಚಳ್ಳಕೆರೆಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ತುಮಕೂರು, ಬೆಂಗಳೂರಿಗೆ ರವಾನಿಸಲಾಗಿದೆ. ಅಪಘಾತದ ಬಳಿಕ ಬಾಲಕನ ಮೃತದೇಹವನ್ನು ವಶಕ್ಕೆ ಪಡೆದ ಪೊಲೀಸರು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಗೆ ದೌಡಾಯಿಸಿದ ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಕಾರು-ಆಟೋ ಸಂಪೂರ್ಣ ಜಖಂ: ಅಪಘಾತದಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ವಾಹನಗಳ ಸಹಾಯದಿಂದ ಪೊಲೀಸ್ ಠಾಣೆಯ ಆವರಣಕ್ಕೆ ತರಲಾಗಿದೆ. ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗುರುವಾರ ನಡೆದಿತ್ತು 2 ಪ್ರತ್ಯೇಕ ಅಪಘಾತ: ಜಿಲ್ಲೆಯಲ್ಲಿಗುರುವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಎರಡು ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿದ್ದ ಘಟನೆ ತಿಪಟೂರು ತಾಲೂಕಿನ ಕರಡಾಳು ಗ್ರಾಮದ ಬಳಿ ನಡೆದಿತ್ತು. ಶಾಂತನಹಳ್ಳಿ ಗ್ರಾಮದ ಸದಾಶಿವಯ್ಯ (62) ಮೃತ ದುರ್ದೈವಿಯಾಗಿದ್ದಾರೆ.

ಬೈಕೊಂದು ಡಿವೈಡರ್​ಗೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಣಿಗಲ್ ತಾಲೂಕಿನ ನಾಗೇಗೌಡನ ಪಾಳ್ಯದಲ್ಲಿ ನಡೆದಿದೆ. ಹಾಸನ ತಾಲೂಕಿನ ಚೌಡನಕುಪ್ಪೆ ಗ್ರಾಮದ ಯುವಕ ವರ್ಷದ ಅಭಿಷೇಕ್ (23) ಮೃತಪಟ್ಟ ದುರ್ದೈವಿ. ಟಿವಿಎಸ್ ಎಕ್ಸೆಲ್​ನಲ್ಲಿ ಮನೆಗೆ ತೆರಳುತ್ತಿದ್ದಾಗ ನಾಗೇಗೌಡನ ಪಾಳ್ಯದ ಕಾಮತ್ ಹೊಟೇಲ್ ಬಳಿ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಯುವಕ ಅಸುನೀಗಿದ್ದನು. ಅಮೃತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details