ತುಮಕೂರು: ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬ ಸಾರ್ವಜನಿಕರಿಂದ ಬಂದ ಆರೋಪಗಳ ಹಿನ್ನೆಲೆಯಲ್ಲಿ ಸ್ವತಃ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಊಟ ಮಾಡಿದರು.
ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಪರೀಕ್ಷಿಸಲು ನೇರವಾಗಿ ಅಡುಗೆ ಕೋಣೆಗೆ ತೆರಳಿದ ಆಯುಕ್ತರು! - Indira Canteen
ಇಂದಿರಾ ಕ್ಯಾಂಟೀನ್ಗೆ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಅಲ್ಲೇ ತಯಾರಿಸಿದ್ದ ಅನ್ನ-ಸಾಂಬಾರ್ ಸೇವಿಸಿದರು.
![ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಪರೀಕ್ಷಿಸಲು ನೇರವಾಗಿ ಅಡುಗೆ ಕೋಣೆಗೆ ತೆರಳಿದ ಆಯುಕ್ತರು!](https://etvbharatimages.akamaized.net/etvbharat/prod-images/768-512-3989805-thumbnail-3x2-cntn.jpg)
ಪಾಲಿಕೆ ಆಯುಕ್ತ ಭೂಪಾಲನ್
ಮಹಾನಗರ ಪಾಲಿಕೆ ಆವರಣದಲ್ಲಿ ಇರುವಂತಹ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಭೂಬಾಲನ್, ನೇರವಾಗಿ ಅಡುಗೆ ಕೋಣೆಗೆ ತೆರಳಿ ಸ್ವಚ್ಛತೆಯನ್ನು ಪರಿಶೀಲಿಸಿದರು. ಅಲ್ಲದೆ ತಯಾರಿಸಲಾಗಿದ್ದ ಅನ್ನ-ಸಾಂಬಾರ್ ಸೇವಿಸಿದರು.
ಪಾಲಿಕೆ ಆಯುಕ್ತ ಭೂಪಾಲನ್
ಇದೇ ವೇಳೆ ಪಾಲಿಕೆ ಅಧಿಕಾರಿಗಳು ಕೂಡ ಹಾಜರಿದ್ದರು.
Last Updated : Jul 30, 2019, 11:32 PM IST