ತುಮಕೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಕಮಿಷನ್ ಶೇ 30-40 ಇತ್ತು. ಹೀಗಾಗಿ ಕಮಿಷನ್ ವಿಚಾರವಾಗಿ ಸಿದ್ದರಾಮಯ್ಯ ಮೇಲೆ 37 ಕೇಸ್ಗಳಿವೆ. ಸಿದ್ದರಾಮಯ್ಯ ಡಿಕೆಶಿ ಗೌರವಯುತವಾದಂತಹ ಟೀಕೆ ಟಿಪ್ಪಣಿ ಮಾಡಲಿ, ಅವರ ಆರೋಗ್ಯಕ್ಕೂ ಒಳ್ಳೆಯದು ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಡಿಯೂರಪ್ಪ ಪ್ರವಾಹ ಬಂದಾಗ 5 ಲಕ್ಷ ರೂ ಪರಿಹಾರ ನೀಡಿದ್ದರು. ದೇಶದಲ್ಲಿ ಯಾವ ಸಿಎಂ ಕೂಡ ಇಷ್ಟು ಪರಿಹಾರ ನೀಡಿರಲಿಲ್ಲ. ಪರಿಹಾರ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಮಾತನಾಡಲ್ಲ, ಯಾಕೆಂದರೆ, ಅವರಿಗೆ ವಿರೋಧ ಆಗುತ್ತೆ ಅಂತ. ಅವರಿಗೆ ಬೇಕಾದ ಅಂಶಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರು ಯಾಕೆ ಮನೆಯಲ್ಲಿ ಕುಳಿತಿದ್ದಾರೆ ಎಂದರು.
ಅನ್ಎಂಪ್ಲಾಯ್ಮೆಂಟ್ ಗ್ರೂಪ್:
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಹಾಗು ಪರಮೇಶ್ವರ್ಗೆ ಸದ್ಯ ಕೆಲಸ ಇಲ್ಲ. ಅವರದ್ದು ಅನ್ಎಂಪ್ಲಾಯ್ಮೆಂಟ್ ಗ್ರೂಪ್. ಪ್ರತಿದಿನ ಏನಾದರೂ ಕಮೆಂಟ್ ಮಾಡಿ ಊಟ, ತಿಂಡಿ ತಿನ್ನಬೇಕು. ಅವರಿಗೆ ಕೆಲಸ ಇಲ್ಲ, ಹೀಗಾಗಿ ಕಮೆಂಟ್ ಮಾಡ್ತಾರೆ ಎಂದರು.
ಪರಮೇಶ್ವರ್ ಆರೋಪ ಚುನಾವಣೆ ಮುನ್ನವೇ ಸೋಲು ಒಪ್ಪಿಕೊಂಡಂತೆ. ಮೂರು ಪಕ್ಷಗಳು ಕೂಡ ನಾಮಪತ್ರ ಸಲ್ಲಿಕೆ ಮಾಡಿದೆ. ಒಳ ಒಪ್ಪಂದ ಆಗಿದ್ದರೆ ಜೆಡಿಎಸ್ನವರು ಯಾಕೆ ಅಭ್ಯರ್ಥಿಯನ್ನು ಹಾಕ್ತಿದ್ದರು. ಜೆಡಿಎಸ್ನಲ್ಲಿ ಅಭ್ಯರ್ಥಿ ಇರಲಿಲ್ಲ, ಹೀಗಾಗಿ ಏಳು ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಿದ್ದಾರೆ. ಬಿಜೆಪಿ ಯಾವುದೇ ಒಪ್ಪಂದದಿಂದ ಬೆಳೆದು ಬಂದ ಪಕ್ಷ ಅಲ್ಲ. ಸ್ವಂತ ಶ್ರಮ ಬೆವರಿನಿಂದ ಬೆಳೆದ ಪಕ್ಷ ಎಂದರು.
ತ್ರಿವರ್ಣ ಧ್ವಜ ನಮ್ಮದು ಅಂತಾ ಡಿಕೆಶಿ ಹೇಳಿಕೆ ವಿಚಾರಕ್ಕೆ, ಇದು ಡಿ.ಕೆ.ಶಿವಕುಮಾರ್ ಅವರ ದಡ್ಡತನದ ಹೇಳಿಕೆ. ಯಾವುದೇ ವಿಚಾರ ಮಾತನಾಡುವ ಮುನ್ನ ಹತ್ತು ಬಾರಿ ಯೋಚಿಸಿ ಮಾತನಾಡಬೇಕು. ಅದು ದೇಶದ ತ್ರಿವರ್ಣ ಧ್ವಜ ಎಂದರು. ಗಾಂಧೀಜಿ ಅಂಬೇಡ್ಕರ್ ಸೇರಿದಂತೆ ದೇಶದ ಜನರ ಒಪ್ಪಿಗೆ ಪಡೆದು ತೀರ್ಮಾನ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರದ್ದು ಮೂರ್ಖತನದ ಹೇಳಿಕೆ ಎಂದರು.