ತುಮಕೂರು :ವಿಧಾನಪರಿಷತ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಿದ್ದ ಕಾಂಗ್ರೆಸ್‌ನವರು ಒಂದು ರೀತಿ ಬ್ಲೂಬಾಯ್ಸ್ ಇದ್ದಂಗೆ ಎಂದು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಲೇವಡಿ ಮಾಡಿದ್ದಾರೆ.
ಗುಬ್ಬಿ ತಾಲೂಕಿನ ಕೆ. ಮತ್ತಿಘಟ್ಟದ ಬಸವನಗುಡಿ ಗ್ರಾಮದಲ್ಲಿ ಎಸ್‌ಸಿಪಿಟಿಎಸ್‌ಪಿ ಯೋಜನೆಯಡಿ ಸಿಸಿ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದ ನಂತರ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅವರು ಅಂತಹ ನೀಚ ಸಂಸ್ಕೃತಿ ಬಿಡಬೇಕು. ಕೂಡಲೇ ಅಂತಹ ಸದಸ್ಯರನ್ನು ಅಮಾನತು ಮಾಡಿ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.