ತುಮಕೂರು:ಶಿರಾ ವಿಧಾನಸಭೆ ಉಪಚುನಾವಣೆ ಕಣ ರಂಗೇರಿದೆ. ವಿವಿಧ ಸಮುದಾಯಗಳ ಮತ ಸೆಳೆಯಲು ಅಲ್ಲಲ್ಲಿ ಆಯಾ ಸಮುದಾಯಗಳ ಸಭೆಗಳನ್ನು ನಡೆಸಲಾಗುತ್ತಿದೆ.
ಬಿಜೆಪಿ ಸಭೆ
ತುಮಕೂರು:ಶಿರಾ ವಿಧಾನಸಭೆ ಉಪಚುನಾವಣೆ ಕಣ ರಂಗೇರಿದೆ. ವಿವಿಧ ಸಮುದಾಯಗಳ ಮತ ಸೆಳೆಯಲು ಅಲ್ಲಲ್ಲಿ ಆಯಾ ಸಮುದಾಯಗಳ ಸಭೆಗಳನ್ನು ನಡೆಸಲಾಗುತ್ತಿದೆ.
ಬಿಜೆಪಿ ಇಂದು ಶಿರಾ ಪಟ್ಟಣದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಬೆಂಬಲಿತ ವಾಲ್ಮೀಕಿ ಸಮುದಾಯದ ಸಭೆಯನ್ನು ನಡೆಸಿತು.
ಸಭೆಯಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿ ಪಕ್ಷದ ಅನೇಕ ಮುಖಂಡರು ಭಾಗವಹಿಸಿದ್ದರು.