ಕರ್ನಾಟಕ

karnataka

ETV Bharat / state

ಜಿ.ಪಂ ಗದ್ದುಗೆಗಾಗಿ ತೆನೆ​​​​-ಕಮಲ ಜಟಾಪಟಿ... ಬಿಜೆಪಿ ಸದಸ್ಯರಿಂದ ಅವಿಶ್ವಾಸ ಮಂಡನೆ - Tumkur District Panchayat Elections

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಬದಲಾವಣೆಗಾಗಿ ಬಿಜೆಪಿ ಅವಿಶ್ವಾಸ ಮಂಡನೆಗೆ ಸಹಿ ಹಾಕಿದ್ದು, ಅಕ್ಟೋಬರ್ 7ರಂದು ಸಭೆ ನಿಗದಿಯಾಗಿದೆ. 5 ವರ್ಷ ಅವದಿಯ ಆಡಳಿತವನ್ನು ಬಿಜೆಪಿ ಹಾಗೂ ಜೆಡಿಎಸ್ ಹಂಚಿಕೊಂಡಿದ್ದು, ಇದೀಗ ಜೆಡಿಎಸ್​ ಅಧ್ಯಕ್ಷರು ತಮ್ಮ ಸ್ಥಾನ ಬಿಟ್ಟುಕೊಡಲು ನಿರಾಕರಿಸುತ್ತಿದ್ದಾರೆ ಎಂದು ಅವಿಶ್ವಾಸ ಮಂಡನೆಗೆ ಮುಂದಾಗಿದ್ದಾರೆ.

tumkur zilla-panchayat
ತುಮಕೂರು ಜಿಲ್ಲಾ ಪಂಚಾಯಿತಿ

By

Published : Sep 25, 2020, 7:01 PM IST

ತುಮಕೂರು:ಇಲ್ಲಿನ ಶಿರಾ ಉಪಚುನಾವಣೆಯ ತಂತ್ರಗಾರಿಗೆ ತಾರಕಕ್ಕೇರಿರುವ ಸಮಯದಲ್ಲೇ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್​ ಹಾಗೂ ಬಿಜೆಪಿಯ ನಡುವೆ ಜಟಾಪಟಿ ಆರಂಭವಾಗಿದೆ. ಇಂದು ಕರೆಯಲಾಗಿದ್ದ ಸಾಮಾನ್ಯ ಸಭೆಗೆ ಕೋರಂ ಕೊರತೆಯಿಂದಾಗಿ ಸಭೆ ರದ್ದು ಮಾಡಲಾಗಿದೆ.

ಈ ನಡುವೆ ಬಿಜೆಪಿ ಸದಸ್ಯರು ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದು, ಅಧ್ಯಕ್ಷೀಯ ಸ್ಥಾನವನ್ನು ಬಿಜೆಪಿಗೆ ಹಸ್ತಾಂತರಿಸಲು ಪಟ್ಟುಹಿಡಿದಿದೆ. ಈ ಹಿನ್ನೆಲೆ ಅವಿಶ್ವಾಸ ಮಂಡನೆ ಮಾಡಿದೆ.

ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ​​ಕೆಂಚಮಾರಯ್ಯ, ಇಂದು ನಡೆಯಬೇಕಿದ್ದ ಸಭೆಯು ಕೋರಂ ಕೊರತೆಯಿಂದ ರದ್ದಾಗಿದ್ದು ಕೇವಲ 14 ಸದಸ್ಯರು ಮಾತ್ರ ಭಾಗಿಯಾಗಿದ್ದರು ಎಂದರು. ಈಗಾಗಲೇ ಅಧ್ಯಕ್ಷರ ಅವಿಶ್ವಾಸ ಮಂಡನೆಗಾಗಿ ಪ್ರಾದೇಶಿಕ ಆಯುಕ್ತರಿಗೆ ಅರ್ಜಿ ನೀಡಲಾಗಿದ್ದು, ಆಯುಕ್ತರು ಅಕ್ಟೋಬರ್ 7ರಂದು ಅವಿಶ್ವಾಸ ಮಂಡನೆಗಾಗಿ ದಿನಾಂಕ ನಿಗದಿ ಮಾಡಿದ್ದಾರೆ.

ಜಿ.ಪಂ ಗದ್ದುಗೆಗಾಗಿ ತೆನೆ​​​​-ಕಮಲ ಜಟಾಪಟಿ

7ರಂದು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಅಂದು ಅಧ್ಯಕ್ಷರ ಅವಿಶ್ವಾಸ ನಿರ್ಣಯ ಅಂತಿಮವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಹಾಗೂ ಬಿಜೆಪಿ ಉಪಾಧ್ಯಕ್ಷ ಸ್ಥಾನವನ್ನು ಹಂಚಿಕೊಂಡು ಇಲ್ಲಿಯವರೆಗೂ ಆಡಳಿತ ನಡೆಸಿದವು, ಈಗ ಬಿಜೆಪಿಯ ಸದಸ್ಯರು ಚಾಣಕ್ಯರಂತೆ ಉಪಾಧ್ಯಕ್ಷ ಸ್ಥಾನವನ್ನು ಉಳಿಸಿಕೊಂಡು, ಕೇವಲ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಅವಿಶ್ವಾಸ ನಿರ್ಣಯ ಮಾಡಲು ಸಹಿ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.

ಉಪಾಧ್ಯಕ್ಷ ಸ್ಥಾನದಲ್ಲಿರುವ ಶಾರದಾ ನರಸಿಂಹಮೂರ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆನಂತರ ಅವಿಶ್ವಾಸ ಗೊತ್ತುವಳಿಗೆ ಸಹಿ ಹಾಕಬೇಕಿತ್ತು, ಮುಂದಿನ 7ನೇ ತಾರೀಖು ಏನು ನಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿಯವರು ಒಂದು ಸಮುದಾಯವನ್ನು ಮುಂದಿಟ್ಟುಕೊಂಡು ಏನೋ ಮಾಡುತ್ತಿದ್ದಾರೆ ಎಂಬ ವಿಚಾರ ಕೇಳಿಬಂದಿದ್ದು ಅವೆಲ್ಲವೂ ವರ್ಕೌಟ್ ಆಗುವುದಿಲ್ಲ ಎಂದರು.

ನಂತರ ಮಾತನಾಡಿದ ಜೆಡಿಎಸ್ ಪಕ್ಷದ ತಿಮ್ಮಯ್ಯ, ಜೆಡಿಎಸ್ ಪಕ್ಷ ಜಿ.ಪಂನ ಅಧ್ಯಕ್ಷ ಸ್ಥಾನದ ಕಾಲಾವಧಿಯ ನಂತರ ಬಿಜೆಪಿಗೆ ಅಧಿಕಾರ ನೀಡುವಂತೆ, ನಮ್ಮ ಪಕ್ಷದ ಹೈಕಮಾಂಡ್ ಜಿ.ಪಂ ಅಧ್ಯಕ್ಷರಿಗೆ ತಿಳಿಸಿತ್ತು, ಆದರೆ ಹೈಕಮಾಂಡ್ ಮಾತನ್ನು ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದು, ಅವಿಶ್ವಾಸ ನಿರ್ಣಯಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

ABOUT THE AUTHOR

...view details