ಕರ್ನಾಟಕ

karnataka

ETV Bharat / state

ಎರಡು ಬೈಕ್ ನಡುವೆ ಡಿಕ್ಕಿ... ಓರ್ವ ಸ್ಥಳದಲ್ಲೇ ಸಾವು - Bike collide: one man died on the spot

ಆ್ಯಕ್ಟೀವ್ ಹೊಂಡ ಹಾಗೂ ಸಿಟಿ 100 ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೈದಾಳ್ ಗೇಟ್ ಬಳಿ ನಡೆದಿದೆ.

ತುಮಕೂರಿನಲ್ಲಿ ಸಂಭವಿಸಿದ ಡಿಕ್ಕಿ ಬೈಕ್

By

Published : Mar 3, 2019, 3:48 PM IST

ತುಮಕೂರು: ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಕೈದಾಳ್ ಗೇಟ್ ಬಳಿ ನಡೆದಿದೆ.

ಮೃತ ಸವಾರ ತಿಪಟೂರು ನಗರ ಬಳಿಯ ಆದಿ ಲಕ್ಷ್ಮೀ ನಗರದ ದಾದಾಪೀರ್(25) ಎಂದು ಗುರುತಿಸಲಾಗಿದೆ. ಆ್ಯಕ್ಟೀವ್ ಹೊಂಡ ಹಾಗೂ ಸಿಟಿ 100 ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಮತ್ತೊಂದು ಬೈಕ್​ನ ಸವಾರ ತುರುವೆ ಕೆರೆ ನಿವಾಸಿ ನವೀನ್ ತೀವ್ರ ಗಾಯಗೊಂಡಿದ್ದು, ತಿಪಟೂರು ಸರ್ಕಾರಿ ಆಸ್ಪತ್ರಗೆ ದಾಖಲು ಮಾಡಲಾಗಿದೆ.

ತುಮಕೂರಿನಲ್ಲಿ ಸಂಭವಿಸಿದ ಡಿಕ್ಕಿ ಬೈಕ್

ಈ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details