ತುಮಕೂರು: ನೀಲಾಯ ನೃತ್ಯ ಕೇಂದ್ರದ ವತಿಯಿಂದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜನವರಿ 11ರಂದು ಸಂಜೆ 5.30ಕ್ಕೆ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭರತನಾಟ್ಯ ತರಬೇತುದಾರರಾದ ಬಾಲ ವಿಶ್ವನಾಥ್ ತಿಳಿಸಿದರು.
ತುಮಕೂರಲ್ಲಿ ಜ. 11ರಂದು ಭರತನಾಟ್ಯ ರಂಗಪ್ರವೇಶ
ನೀಲಾಯ ನೃತ್ಯ ಕೇಂದ್ರದ ವತಿಯಿಂದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜನವರಿ 11ರಂದು ಸಂಜೆ 5.30ಕ್ಕೆ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಭರತನಾಟ್ಯ ತರಬೇತುದಾರರಾದ ಬಾಲ ವಿಶ್ವನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬಳಿ ಭರತನಾಟ್ಯ ಅಭ್ಯಾಸ ನಡೆಸುತ್ತಿದ್ದವರು ಈ ಬಾರಿ ರಂಗಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಭರತನಾಟ್ಯದ ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಪುಷ್ಪಾಂಜಲಿ, ಗಣೇಶ ಸ್ತುತಿ, ವರ್ಣಂ, ಕೊರವಂಜಿ, ವಚನ ಎಂಬ ಪ್ರಕಾರಗಳನ್ನು ಪ್ರದರ್ಶಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುತ್ತಾರೆ. ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಕಲಾ ಪರಿಷತ್ತಿನ ಅಧ್ಯಕ್ಷ ಸಾಯಿ ವೆಂಕಟೇಶ್, ನೃತ್ಯ ಸಂಯೋಜಕ ವಿನಯ್ ಸೂರ್ಯ ಆಗಮಿಸಲಿದ್ದಾರೆ ಎಂದರು.