ಕರ್ನಾಟಕ

karnataka

ETV Bharat / state

ರೈತನಿಂದ ಲಂಚ ಪಡೆದ ಪ್ರಕರಣ: ಬೆಸ್ಕಾಂ ಜೂನಿಯರ್ ಎಂಜಿನಿಯರ್​​ಗೆ 4 ವರ್ಷ ಜೈಲು ಶಿಕ್ಷೆ - bribery case of tumkur

ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ ಏಳನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ಸುಧೀಂದ್ರನಾಥ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

Bescom junior engineer got 4 years prison by bribery case
ರೈತನಿಂದ ಲಂಚ ಪಡೆದ ಪ್ರಕರಣ: ಬೆಸ್ಕಾಂ ಜೂನಿಯರ್ ಇಂಜಿನಿಯರ್​​ಗೆ 4 ವರ್ಷ ಶಿಕ್ಷೆ

By

Published : Sep 15, 2020, 8:55 AM IST

ತುಮಕೂರು:ಟ್ರಾನ್ಸ್​​ಫಾರ್ಮರ್ ಬದಲಾಯಿಸಲು ರೈತರೊಬ್ಬರಿಂದ 10,000 ರೂ. ಲಂಚ ಪಡೆದ ಆರೋಪದ ಮೇರೆಗೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ಬೆಸ್ಕಾಂನ ಜೂನಿಯರ್ ಎಂಜಿನಿಯರ್ ರವೀಶ್ ಎಂಬುವರಿಗೆ ನ್ಯಾಯಾಲಯ 4 ವರ್ಷ ಕಠಿಣ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.

2016ರ ಡಿಸೆಂಬರ್ 26ರಂದು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಇನ್ಸ್​​ಪೆಕ್ಟರ್​​​ ವಿ.ಎಂ. ಗುರುಪ್ರಸಾದ್​ ಅವರು ರೈತರೊಬ್ಬರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ್ದರು. ಆರೋಪಿ ರವೀಶ್ ರೈತನಿಂದ 10 ಸಾವಿರ ರೂ. ಲಂಚ ಪಡೆಯುವಾಗ ಟ್ರ್ಯಾಪ್​​ ಮಾಡಿದ್ದರು. ಈ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ ಏಳನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್. ಸುಧೀಂದ್ರನಾಥ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಎಸಿಬಿ ಪರವಾಗಿ ಸರ್ಕಾರಿ ಅಭಿಯೋಜಕ ಎಂ.ಬಿ.ಬಸವರಾಜು ವಾದ ಮಂಡಿಸಿದ್ದರು.

ABOUT THE AUTHOR

...view details