ತುಮಕೂರು: ರಾಜಕೀಯ ಭವಿಷ್ಯಕ್ಕಾಗಿ ನಾನು ಡಿ. ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸಂಪರ್ಕದಲ್ಲಿ ಇದ್ದೇನೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್ ಗುಬ್ಬಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತುರುವೇಕೆರೆಯಲ್ಲಿ ನಾನು ವಿಧಾನಸಭೆಗೆ ಸ್ಪರ್ಧಿಸಬೇಕು ಎಂದಿದ್ದೆ. ಆದ್ರೆ, ಹೆಚ್.ಡಿ ಕುಮಾರಸ್ವಾಮಿ ಅವರು ಎಂ.ಟಿ ಕೃಷ್ಣಪ್ಪಗೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಅವರ ಇಂತಹ ಮಾತುಗಳನ್ನು ನಾವು ಹಿಂದಿನಿಂದಲೂ ನೋಡುತಿದ್ದೇವೆ ಎಂದಿದ್ದಾರೆ.
ಅವರು ಒಂದೊಂದು ಸಾರಿ ಒಂದೊಂದು ಮಾತು ಹೇಳುತ್ತಾರೆ. ಅವರಿಗೆ ಈ ಮಾತುಗಳು ಎಷ್ಟು ಶೋಭೆ ತರುತ್ತದೆ ಅನ್ನೋದು ಅವರೇ ಯೋಚನೆ ಮಾಡಲಿ ಎಂದರು. ಒಂದು ಕ್ಷೇತ್ರದಲ್ಲಿ ಇಬ್ಬಿಬ್ಬರು ನಾಯಕರನ್ನು ಬೆಳೆಸೋದು ಅವರಿಗೆ ರೂಢಿಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಜನರೇ ಉತ್ತರ ಕೊಡುತ್ತಾರೆ. ಜೆಡಿಎಸ್ನಿಂದ ಬಾಗಿಲು ಮುಚ್ಚಿದೆ ಎಂದ ಮೇಲೆ ಬೇರೆ ಬಾಗಿಲು ತಟ್ಟಬೇಕಲ್ಲ. ಖಂಡಿತವಾಗಿಯೂ ಪಕ್ಷದ ಬಾಗಿಲು ಮುಚ್ಚಿದೆ ಎಂದು ತಿಳಿಸಿದರು.
ಓದಿ:ನೌಕರರಿಗೆ ಕೋವಿಡ್ ಲಸಿಕೆ ಕಡ್ಡಾಯ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್