ಕರ್ನಾಟಕ

karnataka

ETV Bharat / state

ತುಮಕೂರಿನ ಬಸ್ ತಂಗುದಾಣದಲ್ಲಿ ಕರಡಿ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ - ಬಸ್​ ತಂಗುದಾಣದಲ್ಲಿ ಕರಡಿ ಪ್ರತ್ಯಕ್ಷ

ತುಮಕೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ತಡ ರಾತ್ರಿ ಬಸ್​ ತಂಗುದಾಣದಲ್ಲಿ ಕರಡಿ ಪ್ರತ್ಯಕ್ಷವಾಗಿ ಭಯ ಹುಟ್ಟಿಸಿದೆ.

dd
ತುಮಕೂರಿನ ಬಸ್ ತಂಗುದಾಣದಲ್ಲಿ ಕರಡಿ ಪ್ರತ್ಯಕ್ಷ

By

Published : Oct 8, 2020, 11:47 AM IST

ತುಮಕೂರು: ಜಿಲ್ಲೆಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು ಗ್ರಾಮದ ಸಮೀಪ ರಾಜಾರೋಷವಾಗಿ ಓಡಾಡುತ್ತಿವೆ. ನಗರದ ಹೊರವಲಯದ ಬಸ್ ತಂಗುದಾಣದಲ್ಲಿ ಕರಡಿಯೊಂದು ಮಲಗಿದ್ದ ದೃಶ್ಯ ಈಗ ವೈರಲ್ ಆಗಿದೆ.

ತುಮಕೂರಿನ ಬಸ್ ತಂಗುದಾಣದಲ್ಲಿ ಕರಡಿ ಪ್ರತ್ಯಕ್ಷ

ಬಸ್ ತಂಗುದಾಣದಲ್ಲಿ ದೈತ್ಯ ಕರಡಿಯನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ. ಸಿದ್ದಗಂಗಾ ಕ್ರಾಸ್​ನ ಬಸ್ ತಂಗುದಾಣದಲ್ಲಿ ಕರಡಿ ಮಲಗಿರುವುದನ್ನು ಕಂಡು ದಾರಿಹೋಕರು ವಿಡಿಯೋ ಸೆರೆಹಿಡಿದಿದ್ದಾರೆ.

ಜಿಲ್ಲೆಯ ದೇವರಾಯನದುರ್ಗ, ನಾಮದ ಚಿಲುಮೆ ಪ್ರವಾಸಕ್ಕೆ ಜನರು ಹೆಚ್ಚಾಗಿ ಬರುತ್ತಾರೆ. ಈ ಭಾಗದಲ್ಲಿ ಕರಡಿ, ಚಿರತೆ, ಕಾಡು ಪ್ರಾಣಿಗಳ ಚಲನವಲನಗಳ ಮೇಲೆ ಅರಣ್ಯ ಇಲಾಖೆ ನಿಗಾ ಇರಿಸಬೇಕಿದೆ.

ABOUT THE AUTHOR

...view details