ತುಮಕೂರು:ಕರಡಿಯೊಂದು ರೈತರೊಬ್ಬರ ಕಿವಿಯನ್ನು ಕಿತ್ತು ಹಾಕಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ನಡೆದಿದೆ.
ಕರಡಿ ದಾಳಿ: ಗಂಭೀರವಾಗಿ ಗಾಯಗೊಂಡ ರೈತ - Bear Attack news
ಕರಡಿಯೊಂದು ರೈತನ ಮೇಲೆ ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ನಡೆದಿದೆ.
![ಕರಡಿ ದಾಳಿ: ಗಂಭೀರವಾಗಿ ಗಾಯಗೊಂಡ ರೈತ ಕರಡಿ ದಾಳಿ](https://etvbharatimages.akamaized.net/etvbharat/prod-images/768-512-8632202-404-8632202-1598893830761.jpg)
ಕರಡಿ ದಾಳಿ
ಕರಡಿಯನ್ನು ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ
ರೈತ ಮಹಾದೇವಯ್ಯ ಎಂಬುವರೇ ಕರಡಿ ದಾಳಿಗೆ ಒಳಗಾದವರು. ಇಂದು ಮುಂಜಾನೆ ಮಹಾದೇವಯ್ಯ ಹೋಗುತ್ತಿದ್ದಾಗ ಕರಡಿ ದಾಳಿ ಮಾಡಿದೆ. ಬಳಿಕ ರೈತ ಜನರಿರುವ ಪ್ರದೇಶಕ್ಕೆ ತೆರಳಿದ ನಂತರ ಕರಡಿ ಗಾಬರಿಗೊಂಡು ಪರಾರಿಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಹಾದೇವಯ್ಯ ಅವರನ್ನು ಚಿಕಿತ್ಸೆಗಾಗಿ ಗುಬ್ಬಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕರಡಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.