ತುಮಕೂರು: ಯಾರೋ ಒಬ್ಬರು ವೀರಶೈವ ಲಿಂಗಾಯುತ ಸಮುದಾಯವನ್ನು ಹೈಜಾಕ್ ಮಾಡುವ ಉದ್ದೇಶವನ್ನು ಸ್ವಾಮೀಜಿಗಳು ಮನಗಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೀರಶೈವ ಸಮುದಾಯವನ್ನು ಸಿಎಂ ಯಡಿಯೂರಪ್ಪನವರು ತಮ್ಮ ಮಗನ ರಾಜಕೀಯ ಅಭಿವೃದ್ಧಿಗಾಗಿ ದುರುಪಯೋಗ ಮಾಡುತ್ತಿದ್ದಾರೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವುದೇ ನೋಟಿಸ್ ಬಂದಿಲ್ಲ :ಯಾರ ಬಳಿಯೂ ನೋಟಿಸ್ನ ಪ್ರತಿ ಇಲ್ಲ. ನನಗೆ ಯಾವ ನೋಟಿಸ್ ಕೂಡ ತಲುಪಿಲ್ಲ. ಯಾವ ಬೆದರಿಕೆಗೂ ಅಂಜುವುದಿಲ್ಲ, ಹೆದರಲ್ಲ. ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದ್ದು, ಭಯ ಹುಟ್ಟಿಸುವ ಪ್ರಯತ್ನ ನಡೆದಿದೆ. ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ, ನಾವು ಹೆದರುವುದು ಇಲ್ಲ ಎಂದರು.
ನನಗೆ ನೋಟಿಸ್ ಬಂದಿದೆ ಎಂದುವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯ್ತು ಎಂದು ಪ್ರಶ್ನಿಸಿದ ಅವರು, ಮೂರು ದಿನವಾಗಿದೆ. ಆದರೆ, ನೋಟಿಸ್ ಎಲ್ಲೂ ಕಾಣಿಸಿಲ್ಲ. ವಿಜಯೇಂದ್ರ ಕೂಡ ನೋಟಿಸ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಪಕ್ಷದ ನಾಯಕರಾಗಿ ಹಗುರವಾಗಿ ಮಾತನಾಡಬಾರದು ಎಂದರು.
ವಿಜಯೇಂದ್ರ ವಿರುದ್ಧ ಕಿಡಿ :ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಪೊಲೀಸರನ್ನು ಬಳಸಬಾರದು. ವಿಜಯೇಂದ್ರ ಏಕೆ ಒಂದು ವಾರ ದೆಹಲಿಗೆ ಹೋಗಿದ್ರು. ಯಾವ ತನಿಖಾ ಇಲಾಖೆ ಇವರನ್ನು ವಿಚಾರಣೆ ಮಾಡಿದ್ರು, ಎಲ್ಲವೂ ಗೊತ್ತಿದೆ ಎಂದರು.
ಬೃಹತ್ ಸಮಾವೇಶ :ಫೆಬ್ರವರಿ 21ರಂದು ಬೃಹತ್ ಸಮಾವೇಶದ ಸ್ಥಳ ಘೋಷಣೆ ಆಗಿದೆ. ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಪಂಚಮಸಾಲಿಗರು ಬರಲಿದ್ದಾರೆ. ಇದನ್ನು ಹಾಳು ಮಾಡಲು ವಿಫಲ ಮಾಡುವ ಷಡ್ಯಂತ್ರ ನಡೆದಿದೆ ಎಂದರು.
ಈ ಸುದ್ದಿಯನ್ನೂ ಓದಿ:ಬಿ.ವೈ. ವಿಜಯೇಂದ್ರ ಮುಂದಿನ ರಾಜಾಹುಲಿ: ಸಚಿವ ಎಸ್.ಟಿ. ಸೋಮಶೇಖರ್
ನಿನ್ನೆ ವೀರಶೈವ ಲಿಂಗಾಯುತ ಸ್ವಾಮೀಜಿಗಳು ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ನಿರಾಣಿ, ವಿಜಯೇಂದ್ರ ಸೇರಿ ಪಂಚಮಸಾಲಿ ಸಮುದಾಯ ಒಡೆಯುವ ಪ್ರಯತ್ನ ನಡೆದಿದೆ. ಯಾರು ರಾಜಾಹುಲಿ ಆಗುತ್ತಾರೋ, ಯಾರು ಬೆಟ್ಟದ ಇಲಿ ಆಗುತ್ತಾರೋ ಗೊತ್ತಿಲ್ಲ. ಲೂಟಿ ಹೊಡೆದ ಹಣದಿಂದ ಕುತಂತ್ರಗಳು ನಡೆಯುತ್ತಿದೆ. ನಿನ್ನೆ ನಡೆದ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಆಟ ಇದೆ ಎಂದರು.
ವಿರೋಧ ಪಕ್ಷಗಳು ಇದ್ದಾವೆಯೇ?:ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತಿವೆ, ಅವರೂ ಇವರೊಂದಿಗೆ ಅಡ್ಜೆಸ್ಟ್ ಆಗಿದ್ದಾರೆ ಎಂದರು. ಒಬ್ಬ ಮಂತ್ರಿಗಳೇ ನನಗೆ ಫೋನ್ ಮಾಡಿ ಹೇಳಿದ್ದಾರೆ. ನೋಟಿಸ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಸುಮ್ಮನೆ ಕೊಟ್ಟಿದ್ದಾರೆ. ಹೆದರಿಸಲು ಫೆಬ್ರವರಿ 21ರ ನಂತರ ಕೇಂದ್ರದವರೇ ನೋಟಿಸ್ ವಾಪಸ್ ತೆಗೆದುಕೊಳ್ಳುತ್ತಾರೆ ಅಂದಿದ್ದಾರೆ ಎಂದರು.