ಕರ್ನಾಟಕ

karnataka

By

Published : Aug 8, 2021, 4:29 PM IST

Updated : Aug 8, 2021, 10:19 PM IST

ETV Bharat / state

ದ್ವೇಷದ ದಳ್ಳುರಿಗೆ 400 ಬಾಳೆ ಗಿಡಗಳ ನಾಶ; ಕಿಡಿಗೇಡಿಗಳ ಕೃತ್ಯಕ್ಕೆ ರೈತ ಕುಟುಂಬ ಕಣ್ಣೀರು

ಒಂದು ತಿಂಗಳು ಕಳೆದಿದ್ದರೆ ಆ ರೈತ ಕುಟುಂಬ ಕೈ ತುಂಬಾ ಆದಾಯ ನೋಡುವ ನಿರೀಕ್ಷೆಯಲ್ಲಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಒಂದು ವರ್ಷ ಬೆವರು ಸುರಿಸಿ ಬಾಳೆ ತೋಟವನ್ನು ಸಮೃದ್ಧವಾಗಿ ಬೆಳೆಸಿದ್ದರು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ ಫಸಲಿಗೆ ಬಂದ 400 ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ.

Banana farm destroyed in Tumkuru
ದ್ವೇಷದ ದಳ್ಳುರಿಗೆ 400 ಬಾಳೆ ಗಿಡಗಳ ನಾಶ

ತುಮಕೂರು:ದ್ವೇಷದ ದಳ್ಳುರಿಗೆ ಬಾಳೆ ಗಿಡಗಳ ನಾಶ ಮಾಡಿರುವ ಘಟನೆ ತುಮಕೂರು ತಾಲೂಕು ಮುತ್ಸಂದ್ರ ಗ್ರಾಮದಲ್ಲಿ ನಡೆದಿದೆ. ಕಿಡಿಗೇಡಿಗಳು ಫಸಲಿಗೆ ಬಂದಿದ್ದ 400 ಬಾಳೆಗಿಡಗಳನ್ನು ಕತ್ತರಿಸಿ ನಾಶಪಡಿಸಿದ್ದಾರೆ.

ಇನ್ನೂ ಒಂದು ತಿಂಗಳು ಕಳೆದಿದ್ದರೆ ಆ ರೈತ ಕುಟುಂಬ ಕೈ ತುಂಬಾ ಆದಾಯ ನೋಡುವ ನಿರೀಕ್ಷೆಯಲ್ಲಿತ್ತು. ಲಕ್ಷಾಂತರ ರೂಪಾಯಿ ವ್ಯಯಿಸಿ, ಒಂದು ವರ್ಷ ಬೆವರು ಸುರಿಸಿ ಬಾಳೆ ತೋಟವನ್ನು ಸಮೃದ್ಧವಾಗಿ ಬೆಳೆಸಿದ್ದರು. ಆದರೆ ಕಿಡಿಗೇಡಿಗಳು ರಾತ್ರೋರಾತ್ರಿ ಫಸಲಿಗೆ ಬಂದ 400 ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಬೆಳೆ ಕಳೆದುಕೊಂಡ ರೈತ ಕುಟುಂಬ ಕಣ್ಣೀರಿಡುತ್ತಿದೆ.

ದ್ವೇಷದ ದಳ್ಳುರಿಗೆ 400 ಬಾಳೆ ಗಿಡಗಳ ನಾಶ

ತುಮಕೂರು ಗ್ರಾಮಾಂತರದ ಮುತ್ಸಂದ್ರ ಗ್ರಾಮದ ನಿವಾಸಿ ದೇವಪ್ರಸನ್ನ ಕುಮಾರ್ ಒಂದು ಎಕರೆ ಜಾಗದಲ್ಲಿ ಬಾಳೆ ಗಿಡ ಬೆಳೆದಿದ್ದರು. ಒಂದು ವರ್ಷದ ಹಿಂದೆ ಬಾಳೆ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದರು. ಗಿಡಗಳು ಚೆನ್ನಾಗಿ ಬೆಳೆದು ಫಸಲು ಬಂದಿದ್ದವು. ಹದಿನೈದು ದಿನದಲ್ಲಿ ಬಾಳೆ‌ ಗೊನೆಗಳನ್ನು ಕಟಾವು ಮಾಡಬೇಕಿತ್ತು. ಆದರೆ ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಈ ರೀತಿ ಬಾಳೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಮನೆಯ ಸಮೀಪವೇ ತೋಟವಿದ್ದು ಮಾಲೀಕರ ಅರಿವಿಗೆ ಬಾರದಂತೆ ಗಿಡಗಳನ್ನು ಕತ್ತರಿಸಿದ್ದಾರೆ. ಮುತ್ಸಂದ್ರ ಗ್ರಾಮದ ಸುತ್ತಮುತ್ತ ರಾತ್ರಿ ವೇಳೆಯಲ್ಲಿ ಕರಡಿ ಕಾಟವಿದ್ದು, ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಾರೆ. ಈ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಮೀನಿಗೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಮನಸ್ತಾಪವಿದೆ. ಈ ಜಮೀನು ವಿವಾದವೇ ಈ ಘಟನೆ ಹಿಂದಿನ ಕೈವಾಡವಿರಬಹುದು. ಅಲ್ಲದೆ ಅನೇಕ ದಿನಗಳ ಹಿಂದೆ ತೋಟಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದ ವ್ಯಕ್ತಿ ಮದ್ಯ ಸೇವಿಸಿದ್ದನು. ಅವನಿಗೆ ಎಚ್ಚರಿಕೆ ನೀಡಿ ಹೊಡೆದು ಕಳುಹಿಸಿದ್ದರು. ಆತನೇ ಈ ರೀತಿ ಕೃತ್ಯ ಎಸಗಿರಬಹುದು ಎಂದು ಜಮೀನು ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:ಚನ್ನಪಟ್ಟಣದ ಗೌಡಗೆರೆಯಲ್ಲಿ ಬೃಹತ್​ ಗಾತ್ರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪನೆ

Last Updated : Aug 8, 2021, 10:19 PM IST

ABOUT THE AUTHOR

...view details