ತುಮಕೂರು :ಜಿಲ್ಲೆಯಲ್ಲಿ ಹಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆ, ಹೊಲ-ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ರೈತರು ಫಸಲು ಕಳೆದುಕೊಂಡು ಭಾರೀ ನಷ್ಟ ಅನುಭವಿಸುವಂತಾಗಿದೆ.
ಗುಬ್ಬಿ ತಾಲೂಕಿನ ಮದನಘಟ್ಟ, ಅಮ್ಮನಘಟ್ಟದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ನೂರಾರು ಎಕರೆ ಬಾಳೆ ಮತ್ತು ಅಡಿಕೆ ತೋಟಗಳು ಜಲಾವೃತವಾಗಿವೆ.(banana and nut plantations are aquatic for heavy rain) ನೀರು ಜಮೀನಿನಲ್ಲಿ ಕಾಲು ಮಟ್ಟಕ್ಕೆ ನಿಂತಿದೆ. ಬೆಳೆ ಕೊಳೆತು ಹೋಗುವ ಭೀತಿ ಇದೆ.
ಈಗಾಗಲೇ ಅಡಿಕೆ ಮತ್ತು ಬಾಳೆಗೆ ಕೊಳೆ ರೋಗ, ಶಿಲೀಂಧ್ರಗಳ ದಾಳಿಯಿಂದ ನಷ್ಟಕ್ಕೀಡಾದ ರೈತರಿಗೆ ಈ ಮಳೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಫಸಲಿಗೆ ಬಂದಿದ್ದ ನೂರಾರು ಎಕರೆ ಬಾಳೆ ಮತ್ತು ಅಡಿಕೆ ತೋಟಗಳು ಮಳೆ ಸೃಷ್ಟಿಸಿದ ಅವಾಂತರದಿಂದ ಹಾಳಾಗುವ ಭೀತಿ ಇದೆ.