ಕರ್ನಾಟಕ

karnataka

ETV Bharat / state

ಕೋಮುಭಾವನೆ ಕೆರಳಿಸಿದ ಆರೋಪ: ತಲೆಮರೆಸಿಕೊಂಡಿದ್ದ ಮಧುಗಿರಿ ಮೋದಿ ಆಂಧ್ರದಲ್ಲಿ ಅರೆಸ್ಟ್‌.. - Madhugiri Modi

ಅಲ್ಲದೆ ರಾಜ್ಯದ ವಿವಿಧ ಪೊಲೀಸ್​ ಠಾಣೆಗಳಲ್ಲಿ ಅತುಲ್ ಸಬರ್ವಾಲ್ ವಿರುದ್ಧ ಇದೇ ತರಹದ ಪ್ರಕರಣಗಳು ದಾಖಲಾಗಿದ್ದವು. ಈತನ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

atul-sabarwal-alias-madhugiri-modi-arrest
ಪ್ರಚೋದನಾತ್ಮಕ ಹೇಳಿಕೆ ಆರೋಪ:ಅತುಲ್ ಸಬರವಾಲ್ ಅಂದರ್​

By

Published : Feb 26, 2020, 1:25 PM IST

ತುಮಕೂರು :ಪ್ರಚೋದನಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಅತುಲ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೋದಿಯನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅನಂತಪುರ ಜಿಲ್ಲೆಯ ಆಜಾದ್ ನಗರದಲ್ಲಿ ವಶಕ್ಕೆ ಪಡೆದಿರುವ ಪೊಲೀಸರು ಆತನಿಂದ 2 ಮೊಬೈಲ್​ ಜಪ್ತಿ ಮಾಡಿದ್ದಾರೆ. ಒಂದು ಕೋಮಿನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ರೆಕಾರ್ಡ್ ಮಾಡಿ ಫೆಬ್ರವರಿ 10ರಂದು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡಿದ್ದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ ರಾಜ್ಯದ ವಿವಿಧ ಪೊಲೀಸ್​ ಠಾಣೆಗಳಲ್ಲಿ ಅತುಲ್ ಸಬರ್ವಾಲ್ ವಿರುದ್ಧ ಇದೇ ತರಹದ ಪ್ರಕರಣಗಳು ದಾಖಲಾಗಿದ್ದವು. ಈತನ ಬಂಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

ABOUT THE AUTHOR

...view details