ತುಮಕೂರು:ಕಾರಿನ ಹಾರನ್ ಕಿರಿಕಿರಿಗೆ ಕೆಲ ಯುವಕರು ಚಾಲಕನನ್ನು ಡ್ರಾಗರ್ನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ.
ಕಾರಿನ ಪ್ರಯಾಣಿಕರು ದ್ವಿಚಕ್ರ ವಾಹನ ಸವಾರರಿಗೆ ಹಾರನ್ ಹೊಡೆದಿದ್ದೇ ಮುಳುವಾಗಿದೆ. ಹೇಮಂತ್ ಎಂಬ ಕಾರಿನ ಸವಾರನಿಗೆ ಡ್ರ್ಯಾಗರ್ ನಿಂದ 4-5 ಕಡೆ ಇರಿಯಲಾಗಿದೆ. ದ್ವಿಚಕ್ರ ವಾಹನ ಇಬ್ಬರು ಯುವಕರು ಕಾರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಿದ್ದು, ಮುಂದೆ ಹಾದು ಹೋಗುತ್ತಿದ್ದ ದ್ವಿಚಕ್ರವಾಹನ ಸವಾರರಿಗೆ ದಾರಿಗಾಗಿ ಹಾರನ್ (ದಾರಿ ಬಿಡುವಂತೆ ಶಬ್ದ ಮಾಡಿದ್ದಕ್ಕೆ) ಹೊಡೆದಿದ್ದೇ ಕಾರಣ ಎನ್ನಲಾಗ್ತಿದೆ.
ಬೆಂಗಳೂರು ಮೂಲದ ಹೇಮಂತ್ ಎಂಬ ಯುವಕನಿಗೆ ಮೂರ್ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದೆ. ಹೊಟ್ಟೆಯ ಭಾಗ ಹಾಗೂ ಎದೆ ಬೆನ್ನು ಸೇರಿದಂತೆ ಇನ್ನೂ ಅನೇಕ ಭಾಗಗಳಿಗೆ ಡ್ರ್ಯಾಗರ್ ನಿಂದ ಚುಚ್ಚಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಕಾರು ಚಾಲಕ ಹೇಮಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ 108 ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ. ಸ್ಥಳಕ್ಕೆ ಕೊರಟಗೆರೆ ಸಿಪಿಐ ಕೆ ಸುರೇಶ್, ಸಬ್ಇನ್ಸ್ಪೆಕ್ಟರ್ ಚೇತನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಬಿಬಿಎಂಪಿ ಲಾರಿಗೆ ಸಿಲುಕಿ ಇಬ್ಬರು ಯುವಕರು ಸಾವು.. ಅಪಘಾತವಾಗಿ ಗಂಟೆಗಳೇ ಕಳೆದ್ರು ರಸ್ತೆಯಲ್ಲಿದ್ದ ಮೃತದೇಹಗಳು