ಕರ್ನಾಟಕ

karnataka

ETV Bharat / state

ನಿವೇಶನ ವಿವಾದ: ಕುಡುಗೋಲಿನಿಂದ ಹೊಡೆದು ಗಂಭಿರ ಹಲ್ಲೆ - tumakuru latest news

ನಿವೇಶನ ವಿವಾದ ಹಿನ್ನೆಲೆ ಜಗಳ ಆರಂಭವಾಗಿ ಪುನೀತ್ ಎಂಬಾತ ಮಾತಿಗೆ ಮಾತು ಬೆಳೆಸಿ ಏಕಾಏಕಿ ವಸಂತ್ ಕುಮಾರ್ ಎಂಬುವರ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ವಸಂತ್ ಕುಮಾರ್ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Attack on man over land dispute
ನಿವೇಶನ ವಿವಾದ

By

Published : Jun 23, 2020, 12:23 AM IST

ತುಮಕೂರು: ನಿವೇಶನ ವಿವಾದಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ಗಲಾಟೆ ಉಂಟಾಗಿದ್ದು, ವ್ಯಕ್ತಿಯೊಬ್ಬ ಕುಡುಗೋಲಿನಿಂದ ಏಕಾಏಕಿ ಮತ್ತೋರ್ವನ ತಲೆಗೆ ಹೊಡೆದು ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕುಡುಗೋಲಿನಿಂದ ಹೊಡೆದು ಗಂಭಿರ ಹಲ್ಲೆ

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಮುನಿಯೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪುನೀತ್ ಎಂಬಾತ ಮಾತಿಗೆ ಮಾತು ಬೆಳೆಸಿ ಏಕಾಏಕಿ ವಸಂತ್ ಕುಮಾರ್ ಎಂಬುವರ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ವಸಂತ್ ಕುಮಾರ್ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಪುನೀತ್ ಒತ್ತುವರಿ ಮಾಡಿಕೊಂಡು ಕಿರಿಕಿರಿ ಉಂಟು ಮಾಡುತ್ತಿದ್ದಾನೆ ಎಂದು ವಸಂತ್ ಕುಮಾರ್ ಆರೋಪಿಸಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details