ತುಮಕೂರು : ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಲಾಗುತ್ತಿದ್ದು, ಇದು ಭಾರತ ಇಡೀ ಪ್ರಪಂಚದಲ್ಲಿ ಸದೃಢ ರಾಷ್ಟ್ರವಾಗಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದರು.
ಮಧುಗಿರಿಯಲ್ಲಿ ನಡೆದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭಾರತವು ಆಂತರಿಕವಾಗಿ ಸದೃಢವಾದರೆ ಪ್ರಪಂಚದ ಎಲ್ಲ ರಾಷ್ಟ್ರಗಳು ನಮ್ಮನ್ನು ಗೌರವಿಸುತ್ತದೆ. ಹಿಂದೆ ಎರಡು ರಾಷ್ಟ್ರಗಳ ನಡುವೆ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾದರೆ ಹೆಚ್ಚಿನ ರಾಷ್ಟ್ರಗಳು ಬಲಿಷ್ಠ ರಾಷ್ಟ್ರಗಳ ಮೊರೆ ಹೋಗುತ್ತಿತ್ತು. ಆದರೆ, ಪ್ರಸ್ತುತ ಬಲಿಷ್ಠ ರಾಷ್ಟ್ರಗಳೇ ಭಾರತದ ಮಧ್ಯಸ್ಥಿಕೆ ಬಯಸುತ್ತಿದೆ ಎಂದು ಹೇಳಿದರು.