ಕರ್ನಾಟಕ

karnataka

ETV Bharat / state

ಮಾನಸಿಕ ಅಸ್ವಸ್ಥನಿಂದ ಪೊಲೀಸರ ಮೇಲೆ ಹಲ್ಲೆ.. ಬೆಂಗಳೂರಿನ ನಿಮ್ಹಾನ್ಸ್​​​​ಗೆ ಶಿಫ್ಟ್‌.. - ತುಮಕೂರು ಪೊಲೀಸರ ಮೇಲೆ ಹಲ್ಲೆ

ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ತೆರಳಿದ ರಂಗರಾಜು ಅವರಿಂದ, ಮೈಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಹಿಡಿಯಲು ಪ್ರಯತ್ನಿಸಿದರು..

Assault on police by mentally disorder man at tumkur
ಮಾನಸಿಕ ಅಸ್ವಸ್ಥನಿಂದ ಪೊಲೀಸರ ಮೇಲೆ ಹಲ್ಲೆ - ಬೆಂಗಳೂರಿನ ನಿಮಾನ್ಸ್​​​​ಗೆ ರವಾನೆ

By

Published : Mar 16, 2021, 1:35 PM IST

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕು ಕಚೇರಿ ಎದುರು ನಡೆಯುತ್ತಿದ್ದ ರೈತರ ಪ್ರತಿಭಟನೆ ವೇಳೆ ಅಡ್ಡಿಪಡಿಸಿದ ಮಾನಸಿಕ ಅಸ್ವಸ್ಥನನ್ನು ಸೆರೆಹಿಡಿಯಲು ಯತ್ನಿಸಿದ ಪೊಲೀಸರ ಮೇಲೆ ಆತ ಹಲ್ಲೆಗೆ ಮುಂದಾಗಿದ್ದು, ಬಳಿಕ ಆತನನ್ನು ಹಿಡಿದಿರುವ ಘಟನೆ ನಡೆದಿದೆ.

ಮಾನಸಿಕ ಅಸ್ವಸ್ಥನಿಂದ ಪೊಲೀಸರ ಮೇಲೆ ಹಲ್ಲೆ!

ಮಧುಗಿರಿಯ ತುಂಗೋಟಿ ಗ್ರಾಮದ ರಂಗರಾಜು ಎಂಬಾತನನ್ನು ಪೊಲೀಸರು ಬಂಧಿಸಿ, ಆ್ಯಂಬುಲೆನ್ಸ್​​ನಲ್ಲಿ ಬೆಂಗಳೂರಿನ ನಿಮ್ಹಾನ್ಸ್​​​​ಗೆ ಕರೆದುಕೊಂಡು ಹೋಗಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ತೆರಳಿದ ರಂಗರಾಜು ಅವರಿಂದ, ಮೈಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಆತನನ್ನು ಹಿಡಿಯಲು ಪ್ರಯತ್ನಿಸಿದರು.

ಇದನ್ನೂ ಓದಿ:ಅಶ್ಲೀಲ ಸಂದೇಶ ರವಾನಿಸುತ್ತಿದ್ದವನಿಗೆ ಯುವತಿಯಿಂದ ಬಿಸಿ ಬಿಸಿ ಕಜ್ಜಾಯ.. ವಿಡಿಯೋ

ಆದರೆ, ಆತನ ಕಾಲಲ್ಲಿದ್ದ ಶೂ ತೆಗೆದು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ ಸುತ್ತುವರಿದ 5ಮಂದಿ ಪೊಲೀಸರು ಆತನನ್ನು ಸೆರೆ ಹಿಡಿದರು.

ABOUT THE AUTHOR

...view details