ತುಮಕೂರು :ಗಾಂಜಾ ಸೇವಿಸಿ ಅಶ್ಲೀಲವಾಗಿ ಮಾತನಾಡುತ್ತಾ ಪುಂಡಾಟಿಕೆ ಮಾಡುತ್ತಿದ್ದ ಯುವಕನಿಗೆ ಮನೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ. ಇದೇ ಕಾರಣಕ್ಕೆ ಮಾಜಿ ಉಪಮೇಯರ್ ವೆಂಕಟೇಶ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಗರದ ಮೇಳೆಕೋಟೆ ಬಡಾವಣೆಯಲ್ಲಿ ನಡೆದಿದೆ.
ಬುದ್ಧಿವಾದ ಹೇಳಿದ್ದೇ ತಪ್ಪಾ?: ಮಾಜಿ ಉಪಮೇಯರ್ ಮೇಲೆ ಮಚ್ಚಿನಿಂದ ಹಲ್ಲೆ - ತುಮಕೂರಿನಲ್ಲಿ ಯುವಕನಿಂದ ವ್ಯಕ್ತ ಮೇಲೆ ಹಲ್ಲೆ
ಬುದ್ದಿವಾದ ಹೇಳಿದಕ್ಕೆ ಯುವಕನೋರ್ವ ತುಮಕೂರಿನ ಮಾಜಿ ಉಪಮೇಯರ್ ಮೇಲೆ ಹಲ್ಲೆ ನಡೆಸಿದ್ದಾನೆ.
![ಬುದ್ಧಿವಾದ ಹೇಳಿದ್ದೇ ತಪ್ಪಾ?: ಮಾಜಿ ಉಪಮೇಯರ್ ಮೇಲೆ ಮಚ್ಚಿನಿಂದ ಹಲ್ಲೆ assault on former deputy mayor of Thumkur](https://etvbharatimages.akamaized.net/etvbharat/prod-images/768-512-8930429-thumbnail-3x2-hrss.jpg)
ಹಲ್ಲೆಗೊಳಗಾದ ವೆಂಕಟೇಶ್
ಹಲ್ಲೆಗೊಳಗಾದ ವೆಂಕಟೇಶ್
ಮಚ್ಚೇಟಿನಿಂದ ತಲೆಗೆ ಗಂಭೀರ ಗಾಯವಾಗಿ ನರಳುತ್ತಿದ್ದ ವೆಂಕಟೇಶ್ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗ್ತಿದೆ. ಹಲ್ಲೆ ನಡೆಸಿದ ಆರೋಪಿ ಸಯ್ಯದ್ ಖಾಜಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.