ಕರ್ನಾಟಕ

karnataka

ETV Bharat / state

9 ವರ್ಷಗಳ ಹಿಂದೆ ಮನೆ ಕಳ್ಳತನ : ಆರೋಪಿ ಬಂಧನ - tumakuru latest news

ಮನೆಯ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ 89 000 ನಗದು, 40ಗ್ರಾಂ ತೂಕದ ಚಿನ್ನದ ಅವಲಕ್ಕಿ ಸರ, 40 ಗ್ರಾಂ ಮಾಂಗಲ್ಯ ಸರ, ಸೇರಿದಂತೆ ಸುಮಾರು 2,50,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

Arrest those thieves in Tumkur
9 ವರ್ಷಗಳ ಹಿಂದೆ ಮನೆ ಕಳ್ಳತನ

By

Published : Jan 16, 2021, 2:23 AM IST

ತುಮಕೂರು: ಬರೋಬ್ಬರಿ 9 ವರ್ಷಗಳ ಹಿಂದೆ ಮನೆಗಳ್ಳತನ ಮಾಡಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

ಧರ್ಮರಾಜ ಎಂಬಾತನೇ ಬಂಧಿತ ಆರೋಪಿ. 2011ರ ಆಗಸ್ಟ್ 1ರಂದು ರಾತ್ರಿ ಕೊರಟಗೆರೆಯಲ್ಲಿ ನಾಗರಾಜ್ ಎಂಬುವರ ಮನೆ ಕಳ್ಳತನವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ನಾಗರಾಜು ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮನೆಯ ಬೀಗ ಒಡೆದು ಒಳನುಗ್ಗಿದ್ದ ಕಳ್ಳರು ಬೀರುವಿನಲ್ಲಿದ್ದ 89 000 ನಗದು, 40ಗ್ರಾಂ ತೂಕದ ಚಿನ್ನದ ಅವಲಕ್ಕಿ ಸರ, 40 ಗ್ರಾಂ ಮಾಂಗಲ್ಯ ಸರ, ಸೇರಿದಂತೆ ಸುಮಾರು 2,50,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮರಾಜ ಎಂಬಾತನನ್ನು ಬಂಧಿಸಿರುವ ಕೊರಟಗೆರೆ ಪೊಲೀಸರು ಆತನಿಂದ 1,80,000 ರೂ ಮೌಲ್ಯದ 40 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ ಆರೋಪಿ ಧರ್ಮರಾಜ ವಿರುದ್ಧ ಬನವಾಸಿ, ಚಿಕ್ಕಮಗಳೂರು, ದಾವಣಗೆರೆ, ಕುಂದಾಪುರ , ಬಾಗಲಕೋಟೆ, ಅಜ್ಜಂಪುರ, ಚಿತ್ತೂರು ಹಾಗೂ ಆಂಧ್ರಪ್ರದೇಶದ ಅನಂತಪುರದಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

ABOUT THE AUTHOR

...view details