ತುಮಕೂರು:ಖೋಟಾ ನೋಟು ಮುದ್ರಿಸಿ ಚಲಾವಣೆಗೆ ಪ್ರಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವೈಎನ್ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಖೋಟಾನೋಟು ಚಲಾವಣೆಗೆ ಯತ್ನಿಸಿದ ಇಬ್ಬರ ಬಂಧನ - Tumkur forge currency
ಆರೋಪಿಗಳು ತಮ್ಮ ಮನೆಯ ಕೊಠಡಿಯಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು.
ಖೋಟಾನೋಟು
ಶಿವಕುಮಾರ ಮತ್ತು ಶ್ರೀನಿವಾಸ ಬಂಧಿತರು. ಇವರು ತಮ್ಮ ಮನೆಯ ಕೊಠಡಿಯಲ್ಲಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, 275 ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
500 ರೂ. ಮುಖಬೆಲೆಯ 248 ನೋಟುಗಳು, 200 ರೂ. ಮುಖಬೆಲೆಯ 10 ನೋಟುಗಳು, 100 ರೂ. ಮುಖಬೆಲೆಯ 17 ನೋಟುಗಳು ಸೇರಿದಂತೆ, ಕರೆನ್ಸಿ ಮುದ್ರಿಸುವ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.